ದಾವಣಗೆರೆ, ಮಾ.19- ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು 3.15 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ.
ರಾಣೇಬೆನ್ನೂರಿನ ಪ್ರವೀಣ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 2.25 ಲಕ್ಷ ಮೌಲ್ಯದ 37 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 90 ಸಾವಿರ ಬೆಲೆಯ 2 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆ ಕಳ್ಳತನ ಪ್ರಕರಣದ 2ನೇ ಆರೋಪಿಯನ್ನು ಹರಿಹರ ನಗರ ಪೊಲೀಸ್ ಠಾಣೆಯವರು ಪತ್ತೆ ಮಾಡಿ 123 ಗ್ರಾಂ. ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ವಿದ್ಯಾನಗರದ 3ನೇ ಅಡ್ಡ ರಸ್ತೆಯ ವಾಸಿ ಸುಮಿತ್ರಾ ಅವರು ಫೆ.14ರಂದು ತಮ್ಮ ಮನೆ ಕಳ್ಳತನವಾದ ಬಗ್ಗೆ ವಿದ್ಯಾನಗರ ಠಾಣೆಗೆ ದೂರು ನೀಡಿದ್ದರು. ಆಪಾದಿತನು ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಜೈಲು ಪಾಲಾಗಿ 2024ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದನು. ನಂತರ ದಾವಣಗೆರೆ ನಗರದಲ್ಲಿ ಕಳ್ಳತನ ಮಾಡಿದ್ದಾನೆ.