ನಗರದಲ್ಲಿ ನಾಳೆ ಪುರಂದರ ದಾಸರ, ತ್ಯಾಗರಾಜರ ಆರಾಧನಾ ಮಹೋತ್ಸವ

ದಾವಣಗೆರೆ, ಫೆ.16- ಬ್ರಾಹ್ಮಣ ಸಮಾಜ ಸೇವಾ ಸಂಘ ಮಹಿಳಾ ವಿಭಾಗದಿಂದ ಶ್ರೀ  ಪುರಂದರದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ವರ್ತುಲ ರಸ್ತೆ, ನಿಜಲಿಂಗಪ್ಪ ಬಡಾವಣೆಯ ಶ್ರೀ ಶಾರದಾಂಬ ದೇವಸ್ಥಾನದಲ್ಲಿ  ನಾಡಿದ್ದು ದಿನಾಂಕ 18ರ ಮಂಗಳವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಶ್ರೀ ಪುರಂದರದಾಸರ ದೇವರನಾಮ ಹಾಗೂ ಶ್ರೀ ತ್ಯಾಗರಾಜರ ಕೀರ್ತನೆ ಹೇಳಲಾಗುವುದು.

ನಂತರ  ಇತ್ತೀಚಿಗೆ ನಡೆದ ಶ್ರೀ ಪುರಂದರದಾಸರ ದೇವರನಾಮ ಮತ್ತು ಶ್ರೀ ತ್ಯಾಗರಾಜರ ಕೀರ್ತನೆಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. 

ಸಮಾಜ ಬಾಂಧವರು ಹಾಗೂ ಸಾರ್ವಜನಿಕರು  ಭಾಗವಹಿಸಬೇಕಾಗಿ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ಹಾಗೂ ಕಾರ್ಯದರ್ಶಿ ಶ್ರೀಮತಿ ಚಂದ್ರಶೇಖರ್ ಅಡಿಗ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

error: Content is protected !!