ಸಿಂಗ್‌ ನಿಧನಕ್ಕೆ ಜಿ.ಎಂ ಸಿದ್ದೇಶ್ವರ ಸಂತಾಪ

ದಾವಣಗೆರೆ, ಡಿ.27- ಮಾಜಿ ಪ್ರಧಾನಿ  ಮನಮೋಹನ್ ಸಿಂಗ್‍ರವರ ನಿಧನಕ್ಕೆ  ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಸಂತಾಪ ವ್ಯಕ್ತ ಪಡಿಸಿದ್ದಾರೆ.

1991ರಲ್ಲಿ ರಾಜ್ಯಸಭೆಗೆ ಪ್ರವೇಶಿಸುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಸಿಂಗ್‌ ಅವರು  ಕೇವಲ 4 ತಿಂಗಳ ನಂತರ ಅಂದಿನ ಪ್ರಧಾನಿ  ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ  ಹಣಕಾಸು ಸಚಿವರಾಗಿ  ಭಾರತದ ಅರ್ಥಿಕತೆಯಲ್ಲಿ ಪರಿವರ್ತನೆಗೆ ಕಾರಣವಾಗಿದ್ದರು. ನಂತರ 2004 ರಿಂದ 2014ರವರೆಗೆ ಎರಡು ಅವಧಿಗೆ ಭಾರತದ ಪ್ರಧಾನಮಂತ್ರಿಗಳಾಗಿ  ಸೇವೆ ಸಲ್ಲಿಸಿದ್ದ ಕೀರ್ತಿ  ಇವರಿಗೆ ಸಲ್ಲುತ್ತದೆ. ಇವರ ಅಗಲಿಕೆಯಿಂದಾಗಿ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿದ್ದೇಶ್ವರ ತಮ್ಮ  ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

error: Content is protected !!