ದಾವಣಗೆರ, ಡಿ. 27 – ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಬಿಜೆಪಿ ಮುಖಂಡ ನಸೀರ್ ಅಹ್ಮದ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಮನಮೋಹನಸಿಂಗ್ ಅವರು ಚಿಂತಕರು, ವಿದ್ವಾಂಸಕರು ಹಾಗೂ ನಿಗರ್ವಿಗಳು ಆಗಿದ್ದರು. ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತ ಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದವರು. ಯುಪಿಎ ಎರಡು ಅವಧಿಯ ಪ್ರಧಾನಿಯಾಗಿ ಸಲ್ಲಿಸಿದ್ದ ಸೇವೆಯನ್ನು ನಸೀರ್ ಅಹ್ಮದ್ ಕೊಂಡಾಡಿದ್ದಾರೆ.