ದಾವಣಗೆರೆ, ಫೆ.23- ನಗರದ ಹಿಂದೂ ರುದ್ರಭೂಮಿ ಬಳಿ ಇರುವ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಇದೇ ದಿನಾಂಕ 26 ರಿಂದ ಮಾರ್ಚ್ 3 ರವರೆಗೆ ಜಾತ್ರಾ ಮಹೋತ್ಸವ ಜರುಗಲಿವೆ.
ದಿನಾಂಕ 26ರ ಭಾನುವಾರ ಶ್ರೀ ಚೌಡೇಶ್ವರಿ ದೇವಿಯ ಅಭಿಷೇಕ, ಪೂಜೆ ಮತ್ತು ರಾತ್ರಿ ಸಾರು ಹಾಕುವುದು. ದಿನಾಂಕ 27ರ ಸೋಮವಾರ ಬೆಳಿಗ್ಗೆ ಶ್ರೀ ಚೌಡೇಶ್ವರಿ ದೇವಿಯ ಪೂಜೆ ಮತ್ತು ರಾತ್ರಿ ಮುತ್ತೈದೆಯರಿಂದ ಒಂದ್ವೊತ್ತು ಇರುವುದು, ದಿನಾಂಕ 28ನೇ ಮಂಗಳವಾರ ಪಂಚಾಮೃತಾಭಿಷೇಕ, ಶ್ರೀದೇವಿಗೆ ಉಡಿ ತುಂಬುವುದು, ಸಾಯಂಕಾಲ ಮೆರವಣಿಗೆ ಹೊರಡುವುದು. ಮಾರ್ಚ್ 1ನೇ ಬುಧವಾರ ಶ್ರೀ ಚೌಡೇಶ್ವರಿ ದೇವಿಗೆ ಹರಕೆ, ಮುಡುಪುಗಳನ್ನು ಒಪ್ಪಿಸುವ ಕಾರ್ಯಕ್ರಮ ಜರುಗುವುದು.
ದಿನಾಂಕ 3ನೇ ಶುಕ್ರವಾರ ಶ್ರೀ ಚೌಡೇಶ್ವರಿ ದೇವಿಗೆ ಬುತ್ತಿ ಪೂಜೆ ಹಾಗೂ ಸಂಜೆ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ನೆರವೇರುವುದು. ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಕೆ. ಸಂತೋಷ್‍ಕುಮಾರ್ ತಿಳಿಸಿದ್ದಾರೆ.