ದಾವಣಗೆರೆ, ಫೆ. 3 – ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕವು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಉಪನ್ಯಾಸಕಿ, ಲೇಖಕಿ, ಕವಿ, ಬರಹಗಾರ್ತಿ ಸಾಮಾಜಿಕ ಕಾರ್ಯಕರ್ತರಾದದ ಬಿಂದು ಆರ್. ಡಿ. ರಾಂಪುರ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಬಿಂದು ಅವರು ಸ್ವತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ತರಳಬಾಳು ಮಠದ ವತಿ ಯಿಂದ ಶಾಲಾ ಕಾಲೇಜು ಗಳ ಮೂಲಕ ಶಿಕ್ಷಣ, ಆನ್ನ ದಾಸೋಹ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಲು ಪ್ರೋತ್ಸಾಹ ನೀಡಿದ ನೇರ, ದಿಟ್ಟ, ಹೆಜ್ಜೆಯ ತರಳಬಾಳು ಜಗದ್ಗುರು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರಿಗೆ ಅರ್ಪಿಸಿದರು.
January 19, 2025