ಮಥುರಾದ ಸಂಸ್ಕೃತಿ ವಿಶ್ವವಿದ್ಯಾಲಯಕ್ಕೆ ಡೀನ್ ಆಗಿ ಡಾ.ಎಲ್ ಮಂಜುನಾಥ

ಮಥುರಾದ ಸಂಸ್ಕೃತಿ ವಿಶ್ವವಿದ್ಯಾಲಯಕ್ಕೆ ಡೀನ್ ಆಗಿ ಡಾ.ಎಲ್ ಮಂಜುನಾಥ - Janathavaniದಾವಣಗೆರೆ, ಜ. 27 –  ನಗರದ ತರಳಬಾಳು ಬಡಾವಣೆಯಲ್ಲಿ ವಾಸವಾಗಿರುವ, ಹೊಳಲ್ಕೆರೆ ತಾಲ್ಲೂಕಿನ ಬಾಣಗೆರೆ ಗ್ರಾಮದ ನಿವೃತ್ತ ಶಿಕ್ಷಕ ದಿ. ಬಿ. ಕೆ. ಲಿಂಗಪ್ಪ, ದಿ.ಚನ್ನಬಸಮ್ಮ ದಂಪತಿ ಪುತ್ರ ಡಾ.ಎಲ್ ಮಂಜುನಾಥ ಅವರು ಉತ್ತರ ಪ್ರದೇಶದ ಮಥುರಾದಲ್ಲಿರುವ ಸಂಸ್ಕೃತಿ ವಿಶ್ವವಿದ್ಯಾಲಯದ ಡೀನ್ ಆಗಿ ಆಯ್ಕೆಯಾಗಿದ್ದಾರೆ. 

ಗ್ರಾಮೀಣ ಭಾಗದ ಕೃಷಿ ವಿಜ್ಞಾನಿ ಡಾ.ಎಲ್. ಮಂಜುನಾಥ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ಮುಖ್ಯಸ್ಥರಾಗಿ, ಹಾಸನದ ಕೃಷಿ ಕಾಲೇಜಿನ ಡೀನ್ ಆಗಿ, ಹನುಮನಮಟ್ಟಿ ಹಾಗೂ ಧಾರವಾಡದ ಕೃಷಿ ವಿ.ವಿ.ಯ ಎಮಿರೇಟ್ಸ್ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 

ಡಾ. ಮಂಜುನಾಥ ಅವರು ಕರ್ನಾಟಕ, ತಮಿಳುನಾಡು ಕೃಷಿ ವಿ.ವಿ.ಗಳಲ್ಲಿ ಎರಡು ಪಿಎಚ್‌ಡಿ ಗಳಿಸಿ ನೂರಾರು ಸಂಶೋಧನಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. 

ಅಭಿನಂದನೆ : ಮಥುರಾದಲ್ಲಿರುವ ಸಂಸ್ಕೃತಿ ವಿಶ್ವವಿದ್ಯಾಲಯದ ಡೀನ್ ಆಗಿ ಆಯ್ಕೆಯಾಗಿರುವ ಡಾ. ಮಂಜುನಾಥ ಅವರನ್ನು ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ ಅವರು ಅಭಿನಂದಿಸಿದ್ದಾರೆ.

ಕೃಷಿ ತಜ್ಞರೂ ಆಗಿರುವ ಡಾ.ಎಲ್ ಮಂಜುನಾಥ ಭಾರತದ ಹೆಸರಾಂತ ಮಥುರಾದ ಸಂಸ್ಕೃತಿ ವಿ.ವಿ.ಗೆ ಡೀನ್ ಆಗಿರುವುದು ಚಿತ್ರದುರ್ಗಕ್ಕೆ, ದಾವಣಗೆರೆಗೆ ಮತ್ತು ಕರ್ನಾಟಕಕ್ಕೆ ಒಂದು ಹೆಮ್ಮೆಯ ಗರಿ ಎಂದು ಶಾಂತಗಂಗಾಧರ ಅವರು ಶ್ಲ್ಯಾಘಿಸಿದ್ದಾರೆ.

error: Content is protected !!