ದಾವಣಗೆರೆ,ಜು.19- ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕು ಗಳ ಭದ್ರಾ ಅಚ್ಚುಕಟ್ಟು ಪ್ರದೇ ಶದ ಕೊನೆ ಭಾಗದ ರೈತರು ಭತ್ತದ ನಾಟಿಗೆ ಸಿದ್ಧತೆ ನಡೆಸಿದ್ದು, ರೈತರ ಹಿತದೃಷ್ಟಿಯಿಂದ ನೀರು ಬಿಡುವಂತೆ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಸಂಬಂಧಿ ಸಿದ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿ ದ್ದಾರೆ. ಭದ್ರಾ ಅಣೆಕಟ್ಟಿನಲ್ಲಿ ಈವರೆಗೆ 152 ಅಡಿ ನೀರು ಸಂಗ್ರಹವಾಗಿದ್ದು, ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಅಣೆಕಟ್ಟಿಗೆ 10 ಸಾವಿರಕ್ಕಿಂತ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ನಾಡಿದ್ದು ದಿನಾಂಕ 21 ರಂದು ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಭದ್ರಾ ಜಲಾ ಶಯದಿಂದ ನೀರು ಬಿಡುವ ಸಂಭವವಿದೆ.
December 26, 2024