ಹೂವಿನಹಡಗಲಿ, ಮಾ. 23 – ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಕಳೆದ ತಿಂಗಳು, ಬಹಳ ವರ್ಷಗಳಿಂದಲೂ ರಸ್ತೆ ಅಗಲೀಕರಣವಾಗದೇ ನೆನೆಗುದಿಗೆ ಬಿದ್ದಿದ್ದ ಕಿರಿದಾದ ರಸ್ತೆಯನ್ನು ವಿಸ್ತರಣೆ ಮಾಡುವ ಸಲುವಾಗಿ ಅತಿಯಾಗಿ ಒತ್ತು ವರಿ ಮಾಡಿ ಮನೆಗಳು ಹಾಗೂ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದನ್ನು ತೆರವು ಗೊಳಿಸಲಾಗಿತ್ತು. ಆದರೆ, ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಯ ಟೆಂಡರ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆಂದು ನಾಗರಿಕರು ಪತ್ರಿಕೆಗೆ ತಿಳಿಸಿದ್ದಾರೆ.
ಈಗಾಗಲೇ ಬಿಸಿಲು ಹೆಚ್ಚಾಗಿದೆ. ಅದರಲ್ಲೂ ಹಳೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ತೊಂದರೆಯಾಗುತ್ತಿದೆ. ಹಾಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಅಗಲೀಕರಣ, ಚರಂಡಿ ಇತ್ಯಾದಿ ಕೆಲಸವನ್ನು ಬೇಗನೇ ಮಾಡಿ ಮುಗಿಸಲು ಒತ್ತಾಯಿಸಿದರು.