ದಾವಣಗೆರೆ, ಮಾ. 13 – ತೋಳಹುಣಸೆ ಹಾಗೂ ದಾವಣಗೆರೆ ನಡುವಿನ ಬಾಕಿ ಇರುವ ರೈಲು ಮಾರ್ಗ ದ್ವಿಪಥ ಕಾಮಗಾರಿಯನ್ನು ಈ ತಿಂಗಳಲ್ಲೇ ಪೂರ್ಣಗೊಳಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ರೋಹಿತ್ ಎಸ್. ಜೈನ್ ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದಾರೆ.
ದ್ವಿಪಥ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕ್ರಾಸಿಂಗ್ ಸಮಸ್ಯೆಯಿಂದ ರೈಲುಗಳು 20 ರಿಂದ 25 ನಿಮಿಷ ವಿಳಂಬವಾಗುತ್ತಿವೆ ಎಂದವರು ಹೇಳಿದ್ದಾರೆ.
ಇದೇ ವೇಳೆ ಚಿಕ್ಕಬಾಣಾವರ – ದಾವಣಗೆರೆ – ಹುಬ್ಬಳ್ಳಿ ಮಾರ್ಗದ ದ್ವಿಪಥ ಹಾಗೂ ವಿದ್ಯುದೀಕರಣವನ್ನು 2022ರ ಮಾರ್ಚ್ ಒಳಗೆ ಪೂರೈಸಬೇಕು. ಆಗ ರೈಲುಗಳು ಸರಿಯಾಗಿ ಸಂಚರಿಸುವ ಜೊತೆಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹರಿಹರದಲ್ಲಿ ಟರ್ಮಿನಲ್ ಸ್ಟೇಷನ್, ಕೋಚಿಂಗ್ ಡಿಪೋ ಹಾಗೂ ಪಿತ್ ಲೈನ್ ನಿರ್ಮಿಸುವ ಮೂಲಕ ದಾವಣಗೆರೆಯಿಂದ ಹಲವು ರೈಲುಗಳನ್ನು ಓಡಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.