ದಾವಣಗೆರೆ ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ

ದಾವಣಗೆರೆ ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ - Janathavaniದಾವಣಗೆರೆ, ಮಾ.14- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸಿ, ಹಣಕ್ಕೆ ಬೇಡಿಕೆ ಇಡುತ್ತಿರುವುದು ಬೆಳಕಿಗೆ ಬಂದಿದೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಹೆಸರಿನಲ್ಲಿ ಹನುಮಂತರಾಯ ಹೊಸ್ಪೇಟ್ ಎನ್ನುವ ನಕಲಿ ಖಾತೆ ತೆರೆದು ವಂಚಕರು ಸಾರ್ವಜನಿಕರಿಗೆ ನಕಲಿ ಖಾತೆಯಿಂದ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ಸ್ವತಃ ಎಸ್ಪಿ ಹನುಮಂತರಾಯ ಸ್ಪಷ್ಟನೆ ನೀಡಿದ್ದು, ನಕಲಿ ಸಂದೇಶಕ್ಕೆ ಯಾರೂ ಕಿವಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನನ್ನ ಹೆಸರಿನಲ್ಲಿ `ಹನುಮಂತರಾಯ ಹೊಸಪೇಟೆ’ ಎಂದು ಅಸಲಿ ಖಾತೆಗೆ ಹೋಲುವ ರೀತಿಯಲ್ಲೇ ನಕಲಿ ಖಾತೆ ಸೃಷ್ಠಿಸಿ ಹಣದ ಬೇಡಿಕೆ ಇಡುತ್ತಿದ್ದಾರೆ. ಸಾರ್ವಜನಿಕರು ಹಣ ಹಾಕಿ ಮೋಸ ಹೋಗಬಾರದು ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ನನ್ನ ನಕಲಿ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿರುವ ವಿಚಾರ ನನ್ನ ಹೆಂಡತಿ ತಿಳಿಸಿದಾಗ, ನಕಲಿ ಫೇಸ್‌ಬುಕ್ ಖಾತೆಯನ್ನು ಅಳಿಸಲು ನಾನು ತಕ್ಷಣ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಎಲ್ಲಾ ಸ್ನೇಹಿತರು ಮತ್ತು ಸಂಪರ್ಕಗಳನ್ನು ನನ್ನ ಟ್ವಿಟ್ಟರ್ ಖಾತೆಯ ಮೂಲಕ ಎಚ್ಚರಿಸಿದ್ದೇನೆ. ವಾಟ್ಸಾಪ್ ಗುಂಪುಗಳು ಮತ್ತು ಮಾಧ್ಯಮ ಜಾಗೃತಿ ಮಾಡಲಾಗುವುದು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಶೀಘ್ರವೇ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದಿದ್ದಾರೆ.

error: Content is protected !!