ದಾವಣಗೆರೆ ಫೆ.21 – ವಿಶ್ವವಿದ್ಯಾನಿ ಲಯದ 8ನೇ ವಾರ್ಷಿಕ ಘಟಿಕೋತ್ಸವವು ಮಾರ್ಚ್-2021 ರ ಮಾಹೆಯಲ್ಲಿ ಜರುಗಲಿದೆ. ನವೆಂಬರ್/ಡಿಸೆಂಬರ್-2019 ಹಾಗೂ ಸೆಪ್ಟೆಂಬರ್/ಅಕ್ಟೋಬರ್-2020 ರಲ್ಲಿ ನಡೆದ ವಿವಿಧ ಸ್ನಾತಕ/ಸ್ನಾತಕೋತ್ತರ/ಪಿಹೆಚ್‍ಡಿ/ಎಂ.ಫಿಲ್ ಪದವಿಗಳ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪದವಿ/ರಾಂಕ್/ಚಿನ್ನದ ಪದಕ/ಪ್ರಮಾಣ ಪತ್ರಗಳನ್ನು ಈ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.
ಈ ಹಿನ್ನೆಲೆಯಲ್ಲಿ ಮೇಲೆ ಸೂಚಿಸಿದ ವರ್ಷದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ ಈಗಾಗಲೇ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಮಾತ್ರ ಭರ್ತಿ ಮಾಡತಕ್ಕದ್ದು.
ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರದ ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಫೆ.27 ರೊಳಗೆ ಸಲ್ಲಿಸತಕ್ಕದ್ದು. ಇದಕ್ಕಾಗಿ ವಿಶ್ವವಿದ್ಯಾನಿಲಯದ ವೆಬ್ www.davangereuniversity.ac.in ನಲ್ಲಿ ವಿದ್ಯಾರ್ಥಿಗಳು ಎಕ್ಸಾಮಿನೇಶನ್ ಮೆನುವಿಗೆ ಹೋಗಿ ಡಿಯು ಪೋರ್ಟಲ್‍ನಲ್ಲಿ ಕಾನ್ವೊಕೇಷನ್ ಪೋರ್ಟಲ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವುದು. ಈ ಅರ್ಜಿಯನ್ನು ಅಪ್‍ಲೋಡ್ ಮಾಡುವ ಬಗ್ಗೆ ಸೂಚನಾ ವಿವರಗಳನ್ನು ಈ ವೆಬ್‍ಸೈಟ್ ನ ಲಿಂಕ್ ನಲ್ಲಿಯೇ ನೀಡಲಾಗಿದೆ.
ಪಿಹೆಚ್‍ಡಿ/ಎಂ.ಫಿಲ್ ಪದವೀಧರರು ಅರ್ಜಿಯನ್ನು ನೇರವಾಗಿ ಆನ್‍ಲೈನ್ ನಲ್ಲಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.davangereuniversity.ac.in ನಲ್ಲಿ ನೀಡಲಾಗಿರುವ ನೋಂದಣಿ ಸಂಖ್ಯೆಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದು.
ಶುಲ್ಕದ ವಿವರ: ಸ್ನಾತಕ ಪದವಿಗೆ ನವೆಂಬರ್/ಡಿಸೆಂಬರ್-2019 ಮತ್ತು ಸೆಪ್ಟೆಂ ಬರ್/ಅಕ್ಟೋಬರ್-2020ರ ಪೂರ್ಣಗೊಂಡ ವರ್ಷದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.730, ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 590 ರೂ. ಎನ್.ಆರ್.ಎಸ್ ಅಭ್ಯರ್ಥಿಗಳಿಗೆ ರೂ.730 ಶುಲ್ಕ ಇರುತ್ತದೆ.
ಸ್ನಾತಕೋತ್ತರ ಪದವೀಧರರಿಗೆ ನವೆಂಬರ್/ಡಿಸೆಂಬರ್-2019 ಮತ್ತು ಸೆಪ್ಟೆಂಬರ್/ಅಕ್ಟೋಬರ್-2020ರ ಪೂರ್ಣಗೊಂಡ ವರ್ಷದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1232, ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 770, ಎನ್.ಆರ್.ಎಸ್ ಅಭ್ಯರ್ಥಿಗಳಿಗೆ ರೂ.1232 ಇರುತ್ತದೆ.
ಪಿಹೆಚ್‍ಡಿ/ಎಂ.ಫಿಲ್ ಪದವೀಧರರಿಗೆ ನವೆಂಬರ್/ಡಿಸೆಂಬರ್-2019 ಮತ್ತು ಸೆಪ್ಟೆಂ ಬರ್/ಅಕ್ಟೋಬರ್-2020ರ ಪೂರ್ಣ ಗೊಂಡ ವರ್ಷದ ಸಾಮಾನ್ಯ ವರ್ಗದ ಅಭ್ಯ ರ್ಥಿಗಳು ರೂ.2320, ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 2035, ಎನ್.ಆರ್.ಎಸ್ ಅಭ್ಯರ್ಥಿಗಳಿಗೆ ರೂ.2320 ಇರುತ್ತದೆ.
ಬಿ.ಇಡಿ ಪದವೀಧರರಿಗೆ ಡಿಸೆಂಬರ್-2019 ಮತ್ತು ಸೆಪ್ಟೆಂಬರ್/ಅಕ್ಟೋಬರ್-2020ರ ಪೂರ್ಣಗೊಂಡ ವರ್ಷದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.800, ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 650, ಎನ್.ಆರ್.ಎಸ್ ಅಭ್ಯರ್ಥಿಗಳಿಗೆ ರೂ.800 ಇರುತ್ತದೆ
ಬಿಪಿ.ಇಡಿ ಪದವೀಧರರಿಗೆ ನವೆಂಬರ್/ಡಿಸೆಂಬರ್-2019 ಮತ್ತು ಸೆಪ್ಟೆಂಬರ್/ಅಕ್ಟೋಬರ್-2020ರ ಪೂರ್ಣಗೊಂಡ ವರ್ಷದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.800, ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 650, ಎನ್.ಆರ್.ಎಸ್ ಅಭ್ಯರ್ಥಿಗಳಿಗೆ ರೂ.800 ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು (ಪರೀಕ್ಷಾಂಗ ಕಾರ್ಯಾಲಯ), ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ-577007 ಇ-ಮೇಲ್ [email protected] ಮತ್ತು [email protected] ದೂ.ಸಂ: 6363341215, 6363337901, 6363351762 ಸಂಪರ್ಕಿಸಬಹುದು.