ದಾವಣಗೆರೆ, ಫೆ. 17 – ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳ ರಸ್ತೆಗಳಿಗೆ ಹೆಸರುಗಳನ್ನು ಬರೆಸುವುದು, ಬೋರ್ಡ್‌ಗಳನ್ನು ಹಾಕುವುದು ಕಂಡುಬಂದಿದ್ದು, ರಸ್ತೆಗಳಿಗೆ ಹೆಸರಿಡುವುದಕ್ಕೆ ಮಹಾನಗರ ಪಾಲಿಕೆ ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ತಿಳಿಸಿದ್ದಾರೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಲ್ಲಿ ರಸ್ತೆಗಳಿಗೆ ವಿವಿಧ ಹೆಸರುಗಳನ್ನು ಬರೆಸಿರುವುದು ಕಂಡು ಬಂದಿದ್ದು ತಕ್ಷಣ ಆ ನಾಮಫಲಕಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆ ಯಿಂದಲೇ ನಾಮಫಲಕಗಳನ್ನು ತೆರವುಗೊಳಿಸಲಾಗುವುದೆಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.