ಶ್ರೀ ಮಾತಾ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಭಕ್ತರು ತಮ್ಮ ಕೋರಿಕೆ ಪೂರೈಸಿಕೊಳ್ಳಲು `ತುಲಾಭಾರ’ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ.
– ಆರ್.ಜಿ. ನಾಗೇಂದ್ರ ಪ್ರಕಾಶ್
ದಾವಣಗೆರೆ, ಫೆ.15- ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ 23ನೇ ವಾರ್ಷಿಕೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 17 ರಿಂದ 19 ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾತಾ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ, ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಆರ್.ಜಿ. ನಾಗೇಂದ್ರಪ್ರಕಾಶ್ ಇಂದಿಲ್ಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವದ ಪ್ರಯುಕ್ತ ನಾಡಿದ್ದು ದಿನಾಂಕ 17 ರಂದು ಬೆಳಿಗ್ಗೆ 7.10 ರಿಂದ ಪ್ರಾರ್ಥನೆ, ಗಂಗಾ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ದೇವನಾಂದಿ, ಮಂಟಪ ಪೂಜೆ, ಗಣಪತಿ, ಸುಬ್ರಹ್ಮಣ್ಯ, ದತ್ತಾತ್ರೇಯ, ನಾಗಲಿಂಗೇಶ್ವರ, ಸತ್ಯನಾರಾಯಣ, ಆಂಜನೇಯ ಸ್ವಾಮಿ ಹಾಗೂ ನವಗ್ರಹ ದೇವರುಗಳಿಗೆ ಅಭಿಷೇಕ ನಡೆಯಲಿದೆ.
ಶ್ರೀ ಮಾತಾ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಅಭಿಷೇಕ, ಶ್ರೀ ನವಗ್ರಹ ಪುರಸ್ಸರ ಸಹಸ್ರ ಮೋದಕ ಗಣಪತಿ ಹೋಮ, ಮಂತ್ರ, ಪುಷ್ಪ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಿದೆ ಎಂದರು.
ಇದೇ ದಿನಾಂಕ 18 ರಂದು ಬೆಳಿಗ್ಗೆ 8 ರಿಂದ ಎಂದಿನಂತೆ ಪ್ರಧಾನ, ಶ್ರೀ ಮಾತಾ ಅನ್ನಪೂರ್ಣೇಶ್ವರಿಯನ್ನು ಮೊದಲ್ಗೊಂಡು ಎಲ್ಲಾ ದೇವರುಗಳಿಗೆ ಅಭಿಷೇಕ, ಸುಹಾಸಿನಿಯರಿಂದ ಕುಂಕುಮಾ ರ್ಚನೆ, ಪಠಣ, ಶೀಲಾ ನಟರಾಜ್ ಮತ್ತು ಸಂಗಡಿಗರಿಂದ ಶ್ರೀ ಮಹಾಗಣಪತಿ, ನವಗ್ರಹ ಪುರಸ್ಸರ ಶ್ರೀ ಲಲಿತಾ ಪರಮೇಶ್ವರಿ ಹೋಮ, ಪೂರ್ಣಾಹುತಿ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದವಿದೆ.
ದಿನಾಂಕ 19 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವ ಜರುಗಲಿದೆ. ಇದಕ್ಕೂ ಮುನ್ನ ಶ್ರೀ ಮಹಾಗಣಪತಿ ಪೂಜೆ, ರಥಸಪ್ತಮಿ ಪ್ರಯುಕ್ತ ಶ್ರೀ ಸೂರ್ಯನಾರಾ ಯಣ ಪೂಜೆ, ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವದ ಅಂಗವಾಗಿ ಹೋಮಾದಿಗಳು, ರಥಕ್ಕೆ ಕುಂಬಾಭಿ ಷೇಕ, ಬಲಿ ಪ್ರದಾನ, ರಥಾಲಂಕಾರ, ಶ್ರೀ ಮಾತಾ ಅನ್ನಪೂರ್ಣೇಶ್ವರಿ ಅಮ್ಮನವರ ಚರಮೂರ್ತಿಯೊಂದಿಗೆ ರಥೋತ್ಸವ, ಮಹಾದ್ವಾರ ಪ್ರದಕ್ಷಿಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ.
ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತಿತರೆ ಗಣ್ಯರು ರಥೋತ್ಸವ ಕಾರ್ಯ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಭಜನಾ ಕಾರ್ಯಕ್ರಮ : ದಿನಾಂಕ 17 ರಂದು ಕಾಳಿಕಾದೇವಿ ಹಾಗೂ ವಾಗ್ದೇವಿ ಮಹಿಳಾ ಮಂಡಳಿಯವರಿಂದ, ಇದೇ ದಿನಾಂಕ 18 ರಂದು ಶ್ರೀದೇವಿ ವೃಂದದವರಿಂದ ಮತ್ತು 19 ರಂದು ಶ್ರೀ ವಾಸವಿ ವನಿತೆಯರ ಸಮಾಜದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಹಿಳಾ ಸಂಘ ಅಸ್ತಿತ್ವಕ್ಕೆ : ಶ್ರೀ ಮಾತಾ ಅನ್ನಪೂರ್ಣೇಶ್ವರಿ ಮಹಿಳಾ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿ ಪದಾಧಿಕಾರಿಗಳಾದ ತಾತಾ ವೆಂಕಟಾಚಲಪತಿ ಶೆಟ್ರು, ವೈ.ಬಿ. ಸತೀಶ್, ಬಿ.ಹೆಚ್. ಸತೀಶ್, ಪ್ರಕಾಶ್ ಪಾಟೀಲ್, ವೀರಯ್ಯ, ನಾಗಭೂಷಣ, ಕೆ.ಎಸ್. ಕಡೆಕೊಪ್ಪ ಉಪಸ್ಥಿತರಿದ್ದರು.