ಹರಿಹರ, ಜ.16- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹರಿಹರ ತಾಲ್ಲೂಕಿನಲ್ಲಿ ಸಂಕ್ರಾಂತಿಯ ಮುನ್ನ 74 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ 72 ದೇವಸ್ಥಾನ, 1 ಚರ್ಚ್, 1 ಮಸೀದಿ ಒಟ್ಟು 74 ಶ್ರದ್ಧಾ ಕೇಂದ್ರಗಳನ್ನು ಸಂ ಕ್ರಾಂತಿಯ ಮುನ್ನ ಸ್ವಚ್ಛತೆ ಮಾಡುವ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ಆಚ ರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರು ವಂತೆ ಎಲ್ಲಾ ಶ್ರದ್ಧಾ ಕೇಂದ್ರಗಳು ಸ್ವಚ್ಛವಾಗಿರ ಬೇಕೆಂಬುದು ಧರ್ಮಾಧಿಕಾರಿಗಳ ಇಚ್ಛೆಯಾ ಗಿದ್ದು, ಅದರಂತೆ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳಲಾಗಿತ್ತು. ತಾಲ್ಲೂಕಿನಲ್ಲಿ ಒಟ್ಟು 1969 ಜನ ಶ್ರದ್ಧಾಳುಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಈ ಪುಣ್ಯ ಕಾರ್ಯದಲ್ಲಿ ಸಾರ್ವಜನಿಕರು, ಯೋಜ ನೆಯ ಪಾಲುದಾರರು ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಸಿಬ್ಬಂದಿ ಗಳು, ಸ್ವಾಮೀಜಿಗಳು ಪಾಲ್ಗೊಂಡಿದ್ದರು.