ಮಂಡಿಪೇಟೆ ಆಭರಣದ ಅಂಗಡಿಯಲ್ಲಿ ಕಳ್ಳತನ

1.13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಬುರ್ಖಾಧಾರಿಗಳು

ದಾವಣಗೆರೆ, ಮಾ.3- ಮಂಡಿಪೇಟೆಯ ರವಿ ಜ್ಯುವೆಲರಿ ಅಂಗಡಿಯಲ್ಲಿ ಮಾರ್ಚ್ 26ರಂದು 1.13 ಕೋಟಿ ಮೌಲ್ಯದ 1 ಕೆ.ಜಿ 400 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಆಭರಣ ಖರೀದಿಯ ನೆಪದಲ್ಲಿ ಬಂದ ಗುಂಪೊಂದು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಈ ಕೃತ್ಯ ಎಸಗಿದೆ.

ಮಧ್ಯಾಹ್ನ 1 ಗಂಟೆಗೆ ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿ ಸಿದ ಒಬ್ಬ ವ್ಯಕ್ತಿ ಅಂಗಡಿಗೆ ಬಂದಿದ್ದರು. ಆ ಸಮಯದಲ್ಲಿ ಅಂಗಡಿಯ ಐವರು ಸಿಬ್ಬಂದಿ ಯಲ್ಲಿ ಮೂವರು ಊಟಕ್ಕೆ ತೆರಳಿದ್ದರು. ಬೆಳ್ಳಿ ಲೋಟ ಮತ್ತು ಆಭರಣಗಳನ್ನು ಖರೀದಿಸುವು ದಾಗಿ ಹೇಳಿದ ಈ ಗುಂಪು, ಸ್ವಲ್ಪ ಹೊತ್ತು ಅಂಗಡಿಯಲ್ಲಿ ಕಾಲಹರಣ ಮಾಡಿ ಕಳ್ಳತನಕ್ಕೆ ಹೊಂಚು ಹಾಕಿತ್ತು. ಸಿಬ್ಬಂದಿ ತೋರಿಸಿದ ಆಭರಣಗಳನ್ನು ಮಹಿಳೆಯರು ಒಪ್ಪದಿದ್ದಾಗ, ಅವುಗಳನ್ನು ಮರಳಿ ಇಡಲಾಗುತ್ತಿತ್ತು. ಈ ವೇಳೆ ಓರ್ವ ಮಹಿಳೆ ಚಿನ್ನಾಭರಣದ ಪೆಟ್ಟಿಗೆಯೊಂ ದನ್ನು ಎತ್ತಿಕೊಂಡು ತನ್ನ ಬುರ್ಖಾದಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ. ಅನುಮಾನ ಬಾರದಂತೆ ವರ್ತಿಸಿ ಅವರು ಹೊರ ನಡೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂಗಡಿಯ ಮಾಲೀಕರಾದ ರೇಖಾ ರವಿಕುಮಾರ್ ಅವರು ನೀಡಿದ ದೂರಿನಲ್ಲಿ, “ನಾವು ವಾರಕ್ಕೊಮ್ಮೆ ಚಿನ್ನಾಭರಣಗಳ ಲೆಕ್ಕ ಪರಿಶೀಲಿಸುತ್ತೇವೆ. ಆಗ ಒಂದು ಕೆ.ಜಿ ಗಿಂತಲೂ ಹೆಚ್ಚು ಚಿನ್ನಾಭರಣ ಕಡಿಮೆ ಇರುವುದು ಗಮನಕ್ಕೆ ಬಂದಿತು. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆ ಕಳ್ಳತನ ಮಾಡಿರುವುದು ಗೊತ್ತಾಯಿತು. ಹೀಗಾಗಿ ದೂರು ನೀಡಲು ವಿಳಂಬವಾಯಿತು” ಎಂದು ತಿಳಿಸಿದ್ದಾರೆ.

ಕಳುವಾದ ಪೆಟ್ಟಿಗೆಯಲ್ಲಿ 100ಕ್ಕೂ ಹೆಚ್ಚು ಓಲೆ, ಜುಮುಕಿ ಸೇರಿದಂತೆ ಇತರೆ ಚಿನ್ನಾಭರಣ ಗಳಿದ್ದವು. ಕಳ್ಳತನ ತಡವಾಗಿ ಬೆಳಕಿಗೆ ಬಂದಿದ್ದರಿಂದ ಕೆಲವು ಸಾಕ್ಷ್ಯಗಳು ನಾಶವಾಗಿವೆ. ಬಸವನಗರ ಠಾಣೆಯ ಇನ್‌ಸ್ಪೆಕ್ಟರ್ ನಂಜುಂಡ ಸ್ವಾಮಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!