ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ.
ಡಾ. ಕೆ. ಷಣ್ಮುಖ ಅಧ್ಯಕ್ಷತೆ ವಹಿಸುವರು. ಮಹಿಳೆಯರ ಸವಾಲುಗಳು ಮತ್ತು ಪರಿಹಾರಗಳು ವಿಷಯವಾಗಿ ಶ್ರೀಮತಿ ಅರುಣಕುಮಾರಿ ಬಿರಾದಾರ್ ಉಪನ್ಯಾಸ ನೀಡುವರು.
ರೇವಣಸಿದ್ದಪ್ಪ ಅಂಗಡಿ, ಪರಿಮಳ ಜಗದೀಶ್, ರಟ್ಟಿಹಳ್ಳಿ ಶಿವಕುಮಾರ್, ನವೀನ್‌ಕುಮಾರ್ ಉಪಸ್ಥಿತರಿರುವರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು.
ದೇವೀರಮ್ಮ ಮತ್ತು ಹಂಚಿನಮನೆ ಸಿದ್ದಪ್ಪ ಇವರ ದತ್ತಿ ದಾನಿಗಳಾದ ಚೇತನ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಶ್ರೀಮತಿ ಚನ್ನಮ್ಮ ಮತ್ತು ಮೆದಿಕೆರೆ ಗೌಡ್ರ ಹಾಲಪ್ಪ ಸ್ಮರಣಾರ್ಥ ದತ್ತಿ ದಾನಿಗಳಾದ ಹೆಚ್.ಜಿ. ವೀರಣ್ಣಗೌಡ, ಶ್ರೀಮತಿ ವಿ.ಆರ್. ಕಮಲಾಕ್ಷಿ ಮತ್ತು ವಿಠ್ಠಲಪುರದ ರುದ್ರಪ್ಪ ಗೌರವಾರ್ಥ ದತ್ತಿ ದಾನಿಗಳಾದ ಸೀಮಾ ಕಿರಣ್, ವಿ.ಆರ್. ಕಿರಣ್ ಅವರುಗಳಿಂದ ದತ್ತಿ ಕಾರ್ಯಕ್ರಮ ನಡೆಯುವುದು.