ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪ ನ್ಯಾಸ ಕಾರ್ಯಕ್ರಮವು ಎಂ.ಎಂ. ಶಿಕ್ಷಣ ಮಹಾವಿ ದ್ಯಾಲಯದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.
ಡಾ. ಕೆ.ಟಿ. ನಾಗರಾಜನಾಯ್ಕ ಅಧ್ಯಕ್ಷತೆ ವಹಿಸುವರು. ಮಹಿಳಾ ಸಂವೇದೀಕರಣ ವಿಷಯವಾಗಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಉಪನ್ಯಾಸ ನೀಡುವರು.
ಜಿಗಳಿ ಪ್ರಕಾಶ್, ಎ.ಎಂ. ಸಿದ್ದೇಶ್ ಕುರ್ಕಿ, ಪರಿಮಳ ಜಗದೀಶ್, ನವೀನ್‌ಕುಮಾರ್ ಉಪಸ್ಥಿತರಿರುವರು. ರಟ್ಟಿಹಳ್ಳಿ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಶ್ರೀಮತಿ ದಾಕ್ಷಾಯಣಮ್ಮ ಶ್ರೀಕಂಠಯ್ಯ ಸಾಲಿಮಠ ದತ್ತಿ ದಾನಿಗಳಾದ ಶಿವಯೋಗಿ ಎಸ್. ಸಾಲಿಮಠ, ರಂಗವ್ವನಹಳ್ಳಿ ಹನುಮಮ್ಮ ಮಾಕುಂಟೆ ದ್ಯಾಮಪ್ಪ ದತ್ತಿ ದಾನಿಗಳಾದ ಬಿ.ಕೆ. ತಿಪ್ಪೇಸ್ವಾಮಿ, ಅಣಬೇರು ಶ್ರೀಮತಿ ರೇವಮ್ಮ ಮಾಳಿಗೇರ ನಿಂಗಪ್ಪ ದತ್ತಿ ದಾನಿಗಳಾದ ಹೇಮಲತಾ ಅಣಬೇರು ರಾಜಣ್ಣ ಇವರುಗಳಿಂದ ದತ್ತಿ ಕಾರ್ಯಕ್ರಮ ನಡೆಯುವುದು.