ಚಿತ್ರದುರ್ಗ ತಾಲ್ಲೂಕು ದೊಡ್ಡಾಲಘಟ್ಟ (ಕೋಟೆ) ಗ್ರಾಮದ ಶ್ರೀ ರಂಗನಾಥಸ್ವಾಮಿ ರಥೋತ್ಸವ ಇಂದು ಸಂಜೆ 5ಕ್ಕೆ ಪ್ಯಾತಪ್ಳರ ಸಣ್ಣ ನಾಗಪ್ಪ ಮತ್ತು ಮಕ್ಕಳಿಂದ ಶ್ರೀ ರಂಗನಾಥ ಸ್ವಾಮಿ ರಥೋತ್ಸವ ನಡೆಯಲಿದೆ.
ಶ್ರೀಮತಿ ಮಂಜುಳ, ದಿ. ಬ್ಯಾಂಕ್ ಇ ನಾಗರಾಜಪ್ಪ ಮತ್ತು ಮಕ್ಕಳಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಅಂದು ಸಂಜೆ 9ಕ್ಕೆ ಜೋಡಿ ಹಕ್ಕಿಗಳ ಸಂಗಮ ಅರ್ಥಾತ್ ಪ್ರೀತಿಗೆ ಶರಣಾದ ಗರುಡ ಗ್ರಾಮದ ಕಲಾಭಿಮಾನಿಗಳಿಂದ ನಾಟಕ ಪ್ರದರ್ಶನ, ದೇವಸ್ಥಾನ ಕಮಿಟಿಯಿಂದ ದೀಪಾಲಂಕಾರ ಮತ್ತು ಅಣಬೇರು ಗಂಗಾಧರಪ್ಪ, ಶ್ರೀ ಅಣಬೇರು ರಂಗನಾಥ ಆಗ್ರೋ ಫರ್ಟಿಲೈಜರ್ಸ್ ಇವರಿಂದ ವಾದ್ಯಗೋಷ್ಠಿ ನಡೆಯಲಿದೆ.
ನಾಳೆ ರಾತ್ರಿ 8ಕ್ಕೆ ಜಿ.ಆರ್. ರವಿ ಮತ್ತು ಮಕ್ಕಳಿಂದ ಶ್ರೀ ರಂಗನಾಥ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ರಾತ್ರಿ 10ಕ್ಕೆ ಜಿ.ಪಿ. ರಂಗಪ್ಪ ಮತ್ತು ಮಕ್ಕಳಿಂದ ಓಕಳಿ ಕಾರ್ಯಕ್ರಮವಿರುತ್ತದೆ.
ದಿನಾಂಕ 21ರಂದು ಬೆಳಿಗ್ಗೆ 10ಕ್ಕೆ ಸಿದ್ದಾಪುರದ ಪೂಜಾರ್ ನಾಗಪ್ಪ ಮತ್ತು ಮಕ್ಕಳಿಂದ ಭೂತನ ಸೇವೆ (ದೊಡ್ಡ ಎಡೆ) ಜರುಗುವುದು.