ಭರಮಸಾಗರದಲ್ಲಿ ನಾಡಿದ್ದು ಗುರುವಂದನಾ ಕಾರ್ಯಕ್ರಮ

ಭರಮಸಾಗರ, ಮಾ. 18- ಚಿತ್ರದುರ್ಗ ತಾಲ್ಲೂಕು ಭರಮಸಾಗರ ಮಲ್ಲಾರಿರಾವ್ ನಾಡಿಗೇರ್ ಕುಟುಂಬದವರಿಂದ ನಾಡಿದ್ದು ದಿನಾಂಕ 21 ಮತ್ತು 22 ರಂದು ಭರಮಸಾಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಹತ್ತಿರವಿರುವ ಶ್ರೀ ಗುರುದತ್ತ ಮಂದಿರದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

21 ರಂದು ಬೆಳಿಗ್ಗೆ 6.30 ಕ್ಕೆ ವಿವಿಧ ಪೂಜೆಗಳು, ಬೆಳಿಗ್ಗೆ 10.30ಕ್ಕೆ ಶ್ರೀ ಗುರುದತ್ತನಿಗೆ ಪಂಚಾಮೃತ ಅಭಿಷೇಕ ಮತ್ತು ಗೋ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 1.30 ಕ್ಕೆ ತೀರ್ಥ ಮತ್ತು ಪ್ರಸಾದ, ಸಂಜೆ 6 ಕ್ಕೆ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತೀ ಮಹಾರಾಜ್‌ ಅವರಿಗೆ ಮತ್ತು ಶ್ರೀ ಬ್ರಹ್ಮಾನಂದ ತೀರ್ಥ ಭಿಕ್ಷು ಅವರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6.30 ಕ್ಕೆ ಭಕ್ತರಿಂದ ಭಜನೆ ನಡೆಯಲಿದೆ.

22 ರಂದು ಬೆಳಿಗ್ಗೆ 5.30 ಕ್ಕೆ ಕಾಕಡಾರತಿ, ಬೆಳಿಗ್ಗೆ 8.30 ಕ್ಕೆ ಶ್ರೀ ಗುರುದತ್ತನಿಗೆ ರುದ್ರಾಭಿಷೇಕ, ಬೆಳಿಗ್ಗೆ 9.30 ಕ್ಕೆ ಶ್ರೀ ದತ್ತಾತ್ರೇಯ ಮೂಲಮಂತ್ರ ಹೋಮ, ಬೆಳಿಗ್ಗೆ 11 ಕ್ಕೆ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ, ಬೆಳಿಗ್ಗೆ 11.30 ಕ್ಕೆ ಗುರು ಪಾದುಕಾ ಪೂಜೆ ಮತ್ತು ಸಭಾ ಕಾರ್ಯಕ್ರಮ ನಂತರ ಗುರು ಭಿಕ್ಷೆ, ಮಧ್ಯಾಹ್ನ 1.30 ಕ್ಕೆ ಮಹಾಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. 

ಚಳ್ಳಕೆರೆ ತಾಲ್ಲೂಕು ದೊಡ್ಡೇರಿ ಶ್ರೀ ದತ್ತಾವಧೂತ ಪರಮಹಂಸ ಸದ್ಗುರು ಶ್ರೀಸತ್ ಉಪಾಸಿ, ಶ್ರೀ ಬ್ರಹ್ಮಾನಂದ ತೀರ್ಥ ಭಿಕ್ಷು, ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತೀ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ. 

error: Content is protected !!