ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ, ಮಾ.18- ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನನ್ನು ಹಾಡು ಹಗಲೇ ಬರ್ಬರವಾಗಿ ಕೊಲೆ ಮಾಡಿದ ಹಂತಕನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

ಚನ್ನಗಿರಿ ನಿವಾಸಿ ಮಹಮ್ಮದ್ ಸಲೀಂಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಮೊಹಮ್ಮದ್ ಜಾಕೀರ್ ಕೊಲೆಯಾದ ಬಸ್ ಏಜೆಂಟ್.

2022ರ ಜೂನ್‌ 21ರಂದು ಚನ್ನಗಿರಿಯ ಕೈಮರದ ವೃತ್ತದ ಬಳಿ ಬಸ್ಸಿನಿಂದ ಇಳಿದ ಮೊಹಮ್ಮದ್ ಜಾಕೀರ್‌ನನ್ನು ಹಳೇ ವೈಷಮ್ಯದ ಹಿನ್ನೆಲೆ ಮಹಮ್ಮದ್‌ ಸಲೀಂ ಚಾಕುವಿನಿಂದ ಇರಿದು ಕೊಲೆ ಮಾಡಿರುತ್ತಾನೆ.

ಮೃತನ ಹೆಂಡತಿ ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಠಾಣೆಯ ಪೊಲೀಸ್‌ ನಿರೀಕ್ಷಕ ಪಿ.ಬಿ. ಮಧು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿ ಮೇಲಿನ ಆಪಾದನೆ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಎಂ.ಹೆಚ್ ಅಣ್ಣಯ್ಯನವರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪಿರ್ಯಾದು ಪರ ಸರ್ಕಾರಿ ವಕೀಲ ಕೆ.ಎಸ್‌. ಸತೀಶ್ ನ್ಯಾಯ ಮಂಡಿಸಿದ್ದಾರೆ.

error: Content is protected !!