ನಗರದ ಗೌತಮ್ ಶಾಖೆ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿದ್ಯಾನಗರದ ಭಾ.ವಿ.ಪ ಗೌತಮ್ ಶಾಖೆ ಕಚೇರಿಯಲ್ಲಿ ಇಂದು ಬೆಳಿಗ್ಗೆ 11ಕ್ಕೆ ಆಚರಿಸಲಾಗುವುದು. 

ಅಲ್ಲಿ ಕೈ ಕಸೂತಿ ತರಬೇತಿ ಪಡೆಯುತ್ತಿರುವ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಡಾ. ಮಾಧವಿ ಭಿಡೆ ಹಾಗೂ ಡಾ. ಆರತಿ ಸುಂದರೇಶ್ `ಮಹಿಳೆ ಮತ್ತು ಆರೋಗ್ಯ’ ಅನ್ನುವ ವಿಚಾರ ದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಗೌತಮ ಶಾಖೆ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯ್ ಕುಮಾರ್ ತಿಳಿಸಿದ್ದಾರೆ.

error: Content is protected !!