ಸಂಸದರ ಹುಟ್ಟುಹಬ್ಬ : ವಿನೂತನವಾಗಿ ಆಚರಣೆ

ದಾವಣಗೆರೆ, ಮಾ. 11 – ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ದುಂದು ವೆಚ್ಚ ಮಾಡಬೇಡಿ ಎಂದು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷವಾಗಿ ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ.

ಹರಿಹರ ತಾಲ್ಲೂಕಿನ ಮುಖಂಡ ಬೆಳ್ಳೂಡಿ ಬಸವರಾಜ್ ಹಾಗೂ ಹಾಲೇಶ್ ಗೌಡ್ರು ದೇವರಬೆಳಕೆರೆ ಸಿದ್ದವೀರಪ್ಪ ನಾಲೆಯ ಬಲದಂಡೆಯ ಚಾನೆಲ್ ಹೂಳು ತೆಗೆಯುವ ಮೂಲಕ ಸಂಸದರಿಕೆ ಹುಟ್ಟು ಹಬ್ಬದ ಶುಭಾಶಯ ಕೋರಲು ನಿರ್ಧರಿಸಿದ್ದಾರೆ.

ದೇವರಬೆಳಕೆರೆ, ಕಡ್ಲೇಗುಂದಿ, ಸಲಗನಹಳ್ಳಿ, ಬನ್ನಿಕೊಡು, ಶಿವನಹಳ್ಳಿ, ಬೆಳ್ಳೂಡಿ, ಹನಗವಾಡಿ ಮಾರ್ಗವಾಗಿ ಹರಿಹರ ತಲುಪುವ ಈ ನಾಲೆಯ ಹೂಳು ತೆಗೆಯುವ ಕಾರ್ಯ ನಾಡಿದ್ದು ದಿನಾಂಕ 13ರ ಗುರುವಾರ ಪ್ರಾರಂಭವಾಗಲಿದೆ.

error: Content is protected !!