ದಾವಣಗೆರೆ, ಮಾ. 9 – ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಾಡಿದ್ದು ದಿನಾಂಕ 11ರ ಮಂಗಳವಾರ ಮಧ್ಯಾಹ್ನ 3 ಕ್ಕೆ ನಡೆಯಲಿದೆ. ಡಾ. ಪಿ.ಎಂ. ಪ್ರೇಮ ಅಧ್ಯಕ್ಷತೆ ವಹಿಸುವರು. `ಜಾನಪದ ಕಲೆಗಳು’ ವಿಷಯ ಕುರಿತು ಡಾ. ಕೆ.ಸಿ. ನಾಗರಜ್ಜಿ ಉಪನ್ಯಾಸ ನೀಡುವರು. ಬಿ. ವಾಮ ದೇವಪ್ಪ, ಎಸ್.ಆರ್. ಶಿರಗುಂಬಿ, ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ನಾಗವೇಣಿ, ನವೀನ್‌ಕುಮಾರ್ ಉಪಸ್ಥಿತರಿರುವರು. ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡುವರು. ನಾಗರತ್ನಮ್ಮ ನೇತ್ರದಾನಿ ಐನಳ್ಳಿ ಕೊಟ್ರಪ್ಪನವರ ದತ್ತಿ ದಾನಿಗಳಾದ ಶ್ರೀಮತಿ ಉಮಾದೇವಿ ಐ.ಕೆ., ದಾವಣಗೆರೆ ತಾ. 7ನೇ ಕಸಾಪ ಹದಡಿ 217ರ ಸವಿನೆನಪು ದಾನಿಗಳಾದ ಬಿ. ವಾಮದೇವಪ್ಪ, ಹಿರೇತೊಗಲೇರಿ ಶ್ರೀಮತಿ ಚೆನ್ನಮ್ಮ ದೊಡ್ಡಗೌಡರ ಸಿದ್ದರಾಮಪ್ಪ ದತ್ತಿ ದಾನಿಗಳಾದ ಇವರುಗಳಿಂದ ನಡೆಯುವುದು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ, ಹಿರಿಯ ನಾಗರಿಕರ ಸಹಾಯವಾಣಿ ಇವರುಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
March 13, 2025