ದಾವಣಗೆರೆ, ಮಾ.9- ದಾವಣಗೆರೆ ವಿಶ್ವವಿದ್ಯಾನಿಯಲದ 12ನೇ ವಾರ್ಷಿಕ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಹೊರಡಿಸಿದ ತಾತ್ಕಾಲಿಕ ರ‍್ಯಾಂಕ್ ಪಟ್ಟಿಗೆ ಯಾವುದೇ ಆಕ್ಷೇಪಣೆ ಬರದಿದ್ದರಿಂದ 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕ ಬಿಇಡಿ ಹಾಗೂ ಪದವಿ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನ ಇ. ಚೈತ್ರಾ ಮತ್ತು ಮಲ್ಲಾಡಿಹಳ್ಳಿ ರಾಘವೇಂದ್ರ ಕಾಲೇಜಿನ ಸಿ.ಎಂ ಕೀರ್ತನಾ ಸಿಜಿಪಿಎ 8.98 ಅಂಕ ಪಡೆದು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಚಿತ್ರದುರ್ಗದ ಜಿ.ಸಿ.ಟಿ ಕಾಲೇಜಿನ ಜಿ. ಪ್ರಿಯಾಂಕ (ದ್ವಿತೀಯ), ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನ ಶಶಿಕಲಾ ಕೊಡ್ಲಹಳ್ಳಿ ಮತ್ತು ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಕಾಲೇಜಿನ ಎಸ್.ಎ ಕಾವ್ಯ (ತೃತೀಯ) ಸ್ಥಾನ ಪಡೆದಿದ್ದಾರೆ.
ಮಲ್ಲಾಡಿಹಳ್ಳಿ ರಾಘವೇಂದ್ರ ಕಾಲೇಜಿನ ಮುಸ್ಕಾನ್ ಬಾನು ಮತ್ತು ಹೊಸದುರ್ಗ ಇಂದಿರಾಗಾಂಧಿ ಕಾಲೇಜಿನ ಎಸ್. ಸ್ನೇಹಾ (ನಾಲ್ಕನೇ ಸ್ಥಾನ), ದಾವಣಗೆರೆಯ ಬಿಇಎ ಕಾಲೇಜಿನ ರಾಧಿಕಾ ಸುರೇಶ್ ಮಡಿವಾಳರ್ (5ನೇ) ಸ್ಥಾನ ಹೊಂದಿದ್ದಾರೆ.
ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಕಾಲೇಜಿನ ಕಾವ್ಯ ಬಸನಗೌಡ ಪಾಟೀಲ್ ಮತ್ತು ಆರ್. ಐಶ್ವರ್ಯ ಹಾಗೂ ಹರಿಹರದ ಶ್ರೀಶೈಲ ಕಾಲೇಜಿನ ಜಿ.ವಿ. ಸೃಷ್ಠಿ (6ನೇ ಸ್ಥಾನ), ಪರಶುರಾಂಪುರದ ವೇದಾವತಿ ಕಾಲೇಜಿನ ಎಲ್. ಪವನ್ (7ನೇ) ಸ್ಥಾನ ಪಡೆದಿದ್ದಾನೆ.
ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನ ವಿ. ಅನ್ನಪೂರ್ಣ (8), ಪರಶುರಾಂಪುರದ ವೇದಾವತಿ ಕಾಲೇಜಿನ ಬಿ.ಆರ್. ರಾಧಿಕಾ ಮತ್ತು ದಾವಣಗೆರೆಯ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಮಹಿಳಾ ಕಾಲೇಜಿನ ಎ. ರಾಬಿಯಾ ಬಸ್ರಿ 9ನೇ ಸ್ಥಾನ ಗಳಿಸಿದ್ದಾರೆ.
ಹೊಸದುರ್ಗ ಎಸ್‌ವಿಎಸ್ ಕಾಲೇಜಿನ ಭೋಗೇಶ್ ಮತ್ತು ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಕಾಲೇ ಜಿನ ಹೆಚ್.ಆರ್. ಭೂಮಿಕಾ 10ನೇ ಸ್ಥಾನ ಹೊಂದಿದ್ದಾರೆ.