ಜನರ ನೀರಿನ ದಾಹ ತಣಿಸುವ ಸತ್ಕಾರ್ಯಕ್ಕೆ ಮುಂದಾಗಲು ಶಿವನಕೆರೆ ಬಸವಲಿಂಗಪ್ಪ ಕರೆ

ದಾವಣಗೆರೆ, ಮಾ.9-  ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದ್ದು ಜನ, ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೆ ಇನ್ನೊಂದೆಡೆ ನೀರಿನ ಕೊರತೆ ಕಾಡುತ್ತಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ನಗರಗಳಲ್ಲಿ ಅಲ್ಲಲ್ಲಿ ನೀರು, ಮಜ್ಜಿಗೆ, ಎಳನೀರು, ಪಾನಕದಂಥ ತಂಪು ಪಾನೀಯ ವಿತರಿಸಿ, ಸಾರ್ವಜನಿಕರ ನೀರಿನ ದಾಹ ತಣಿಸುವ ಸತ್ಕಾರ್ಯ ಮಾಡಬೇಕು ಎಂದು  ಕರುಣಾ ಜೀವ ಟ್ರಸ್ಟ್‌ನ ನಿರ್ದೇಶಕ ಶಿವನಕೆರೆ ಬಸವಲಿಂಗಪ್ಪ  ಕೋರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ತಮ್ಮ ಟ್ರಸ್ಟ್ ನಿಂದ ಸತತ ಎಂಟು ವರ್ಷಗಳಿಂದ ಬೇಸಿಗೆಯಲ್ಲಿ ಒಂದು ತಿಂಗಳ ಕಾಲ ನಾಲ್ಕು ಕಡೆಗಳಲ್ಲಿ ಉಚಿತ ಮಜ್ಜಿಗೆ ಮತ್ತು ನೀರು ವಿತರಣೆ ಮಾಡಲಾಗುತ್ತಿದೆ. ಇದೇ ರೀತಿಯ ಕಾರ್ಯವನ್ನು ಸಾರ್ವಜನಿಕರು ತಮ್ಮ ಭಾಗದಲ್ಲಿ ಮಾಡಬೇಕು ಎಂದರು.

ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ಕೊಡಲು ಇಚ್ಛಿಸುವವರು ಒಂದು ಕಡೆ ಮಜ್ಜಿಗೆ ವಿತರಿಸಲು 2 ಸಾವಿರ ರೂ. ಕೊಟ್ಟರೆ ಟ್ರಸ್ಟ್ ಮೂಲಕ ಆ ದಿನ ಅವರ ಹೆಸರಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಕರುಣಾ ಜೀವ  ಕಲ್ಯಾಣ ಟ್ರಸ್ಟ್‌ನ ನಿರ್ದೇಶಕರಾದ  ಮಂಜುಳಾ ಬಸವಲಿಂಗಪ್ಪ, ಈಶ್ವರಪ್ಪ, ಉದಯಕುಮಾರ್, ಜಯಣ್ಣ, ಮಧುಸೂದನ್ ಇನ್ನಿತರರು ಇದ್ದರು.

error: Content is protected !!