ಗೊಲ್ಲರಹಟ್ಟಿಯ ಕೋಡಿ ಚೌಡೇಶ್ವರಿ ದೇವಿ ಜಾತ್ರೆ 13ಕ್ಕೆ

ದಾವಣಗೆರೆ, ಮಾ.9- ತಾಲ್ಲೂಕಿನ ಬಸವನಾಳ್ ಗೊಲ್ಲರ ಹಟ್ಟಿಯ ಪೂಜಾರ್ ಹೊಲದಲ್ಲಿ ರುವ ಶ್ರೀ ಕೋಡಿ ಚೌಡೇಶ್ವರಿ ದೇವಿ 35ನೇ ವರ್ಷದ ಜಾತ್ರೆಯು ಇದೇ ದಿನಾಂಕ 13 ಮತ್ತು 14ರಂದು ಜರುಗಲಿದೆ. 

13ರಂದು ದೇವಿಗೆ ವಿಶೇಷ ಪೂಜೆ ಗಳು ಜರುಗಲಿದ್ದು, ರಾತ್ರಿ ಭಜನಾ ಕಾರ್ಯಕ್ರಮ ಏರ್ಪಾಡಾಗಿದೆ. 

14ರಂದು ಬೆಳಿಗ್ಗೆ ಅಭಿಷೇಕ, ಅಗ್ನಿಕೆಂಡ ನಂತರ ಬೇವಿನ ಉಡುಗೆ ಸೇವೆ, ಜವಳ, ಹರಕೆ ತುಲಾಭಾರ ಇತ್ಯಾದಿ ಕಾರ್ಯ ಕ್ರಮಗಳು ಜರುಗಲಿವೆ. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ 4 ಗಂಟೆಯಿಂದ ಬೆಲ್ಲದ ಬಂಡಿ ಕಾರ್ಯಕ್ರಮ ವಿರುತ್ತದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

error: Content is protected !!