ನಗರದಲ್ಲಿ ಇಂದು ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶ

 ಎಐಡಿವೈಓ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ಎ.ಆರ್.ಜಿ. ಕಾಲೇಜಿನ ಸಭಾಂಗಣದಲ್ಲಿ `ಜಿಲ್ಲಾ ಮಟ್ಟದ ಯುವ ಜನರ ಸಂಕಲ್ಪ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

ನಿವೃತ್ತ ಪ್ರಾಚಾರ್ಯ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸು ವರು. ಎಐಡಿವೈಓ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್ ಆಶಯ ನುಡಿಯಾಡಲಿದ್ದಾರೆ. ಎ.ಆರ್.ಜಿ. ಕಾಲೇಜಿನ ಪ್ರಾಚಾರ್ಯ ಡಾ.ಜಿ.ಬಿ. ಬೋರಯ್ಯ ಪ್ರತಿಜ್ಞಾ ವಿಧಿ ಬೋಧಿಸಲಿದ್ದು, ಶಿವಮೊಗ್ಗದ ಮನೋ ಚಿಕಿತ್ಸಕರು ಹಾಗೂ ಆಪ್ತ ಸಲಹೆಗಾರರಾದ ನಡಹಳ್ಳಿ ವಸಂತ್ `ಲೈಂಗಿಕ ಅಪರಾಧಗಳು- ಕಾರಣ ಮತ್ತು ಪರಿಹಾರ’ ವಿಷಯ ಮಂಡನೆ ಮಾಡಲಿದ್ದಾರೆ.

ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ `ಇಂದಿನ ಯುವ ಮನಸ್ಸಿನ ತಲ್ಲಣಗಳು’ ಕುರಿತು ವಿಷಯ ಮಂಡನೆ ಮಾಡಲಿದ್ದು, ಎಐಡಿವೈಓ ಜಿಲ್ಲಾ ಸಂಚಾಲಕ ಪಿ. ಪರಶುರಾಮ್ ಅಧ್ಯಕ್ಷತೆ ವಹಿಸುವರು. ಸಹ ಸಂಚಾಲಕ ಕೆ. ಅನಿಲ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!