ಕದಳಿ ಮಹಿಳಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಕುವೆಂಪು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿ. ವಾಮದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗಾಯತ್ರಿ ವಸ್ತ್ರದ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಶರಣ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆ ವಿಷಯವಾಗಿ ಉಮಾ ಶ್ರೀನಿವಾಸ್ ಅನುಭಾವ ನುಡಿಗಳನ್ನಾಡಲಿದ್ದಾರೆ. ಪ್ರಮೀಳ ನಟರಾಜ್, ಕೆ.ಬಿ. ಪರಮೇಶ್ವರಪ್ಪ, ಮಮತಾ ನಾಗರಾಜ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆಯ ಸದಸ್ಯರಿಗೆ ಮತ್ತು ಸಾರ್ವಜನಿಕ ಮಹಿಳೆಯರಿಗೆ
ವೇದಿಕೆ ವತಿಯಿಂದ ವಿವಿಧ
ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ನಿರ್ಮಲ ವಾಲಿ, ಮಮತ ಮಧು, ಉಮಾ ಮಹದೇವ್ ತೀರ್ಪುಗಾರರಾಗಿ ಉಪಸ್ಥಿರಿರುವರು ಎಂದು ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ.