ದಾವಣಗೆರೆ, ಮಾ.10- ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಇದೇ ದಿನಾಂಕ 15ರಿಂದ 17ರ ವರೆಗೆ `ರಾಷ್ಟ್ರೀಯ ವೃತ್ತಿ ರಂಗೋತ್ಸವ-2025′ ನಡೆಯಲಿದೆ.
ವಿಚಾರ ಸಂಕಿರಣ, ರಂಗ ದಾಖಲೆ, ಚಿತ್ರಕಲಾ ಪ್ರದರ್ಶನ ಮತ್ತು ರಂಗ ಸಂವಾದ ಸೇರಿದಂತೆ, ಮೂರು ದಿವಸ 3 ಮಹತ್ವದ ನಾಟಕಗಳ ಪ್ರದರ್ಶನ ಜರುಗಲಿವೆ. ಈ ಮೂರೂ ನಾಟಕಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ `ನಾಟಕ ವಿಮರ್ಶಾ’ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಜೇತ ಅಭ್ಯರ್ಥಿಗಳಿಗೆ ಪ್ರಥಮ ಬಹುಮಾನವಾಗಿ (3 ಸಾವಿರ ನಗದು), ದ್ವಿತೀಯ (2 ಸಾವಿರ ನಗದು) ಹಾಗೂ ತೃತೀಯ 1 ಸಾವಿರ ನಗದನ್ನು ಮಾ.27ರಂದು ನಡೆಯುವ `ವಿಶ್ವ ರಂಗಭೂಮಿ ದಿನಾಚರಣೆ’ ಕಾರ್ಯಕ್ರಮದಲ್ಲಿ ನೀಡಲಾಗುವುದು.
ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ರಂಗ ಕಲಾವಿದರ ಬಹಿಷ್ಕಾರ
ದಾವಣಗೆರೆ, ಮಾ. 10- ನಗರದಲ್ಲಿ ಇದೇ ದಿನಾಂಕ 15 ರಿಂದ 17 ರವರೆಗೆ ನಡೆಯಲಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವ ಕಾರ್ಯಕ್ರಮಕ್ಕೆ ದಾವಣಗೆರೆ ವೃತ್ತಿ ರಂಗಭೂಮಿ ಪ್ರಜ್ಞಾವಂತ ಕಲಾವಿದರು ಬಹಿಷ್ಕಾರ ಹಾಕಲಿದ್ದಾರೆಂದು ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ. ಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ವೃತ್ತಿ ರಂಗೋತ್ಸವದಲ್ಲಿ ಸ್ಥಳೀಯ ಕಲಾವಿದರ ಕಂಪನಿಗೆ ಅವಕಾಶ ನೀಡದೇ ಬೇರೆಯವರಿಗೆ ಅವಕಾಶ ಮಾಡಿ ಕೊಡಲಾಗಿದೆ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರ ಸ್ವಜನ ಪಕ್ಷಪಾತ, ಸ್ಥಳೀಯರನ್ನು ಕಡೆಗಣಿಸಿ, ವಿರೋಧಿಸಿ ವೃತ್ತಿ ರಂಗಭೂಮಿ ಕಲಾವಿದರ ಸಂಘ ಮತ್ತು ವೃತ್ತಿ ರಂಗಭೂಮಿ ಕಲಾವಿದರ ಒಕ್ಕೂಟದಿಂದ ಬಹಿಷ್ಕಾರ ನಿರ್ಧಾರ ಕೈಗೊಳ್ಳಲಾಗಿದೆ. ಮೂರು ದಿನಗಳ ರಂಗೋತ್ಸವದ ಯಾವುದೇ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿ ಕಲಾವಿದರು ಭಾಗವಹಿಸುವುದಿಲ್ಲ ಎಂದರು.
ಸಂಘದ ತುರುವನೂರು ಅಹ್ಮದ್ ಷರೀಫ್ ಮಾತನಾಡಿ, ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾಗಿರುವವರಿಗೆ ವೃತ್ತಿ ರಂಗ ಭೂಮಿಯ ಯಾವುದೇ ಚಟುವಟಿಕೆಗೆ ಸಂಬಂಧವೇ ಇಲ್ಲ. ಅಂತವರು ಯಾರದ್ದೋ ಶಿಫಾರಸ್ಸು ಮಾಡಿ ನಿರ್ದೇಶಕರಾಗಿದ್ದಾರೆ. ಕೂಡಲೇ ಅವ ರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಎಸ್.ಕೊಟ್ರೇಶ್, ಶಶಿಕಲಾ, ಸಾವಿತ್ರಿ ರಿತ್ತಿ, ಮಹೇಶ್, ಜಿ. ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯು ಹಲವು ಷರತ್ತುಗಳನ್ನು ಒಳಗೊಂಡಿದ್ದು, ಐದುನೂರು ಪದಗಳ ಮಿತಿಯಲ್ಲಿರಬೇಕು. ವಿಮರ್ಶೆ ಮೂರು ನಾಟಕಗಳ ಕುರಿತು ಇರಬೇಕು ಮತ್ತು ತಾವು ವಿದ್ಯಾರ್ಥಿ ಎಂಬುದರ ದಾಖಲೆ ಸಲ್ಲಿಸಬೇಕಿದೆ.
ವಿಮರ್ಶಾ ಬರಹ ಕಳುಹಿಸಬೇಕಾದ ವಿಳಾಸ : ನಿರ್ದೇಶಕರು, ವಿಶೇಷಾಧಿಕಾರಿಗಳು ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ 38ಎ ಮೊದಲ
ಮಹಡಿ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ
ದಾವಣಗೆರೆ – 577006. ಈ ವಿಳಾಸಕ್ಕೆ ಇದೇ ದಿನಾಂಕ 20 ರೊಳಗೆ ತಮ್ಮ ಬರಹ ಸಲ್ಲಿಸಬೇಕು.