ಸುಂಕದಕಟ್ಟಿ ಮಂಜುನಾಥ ಸ್ವಾಮಿ ಹುಂಡಿ ಎಣಿಕೆ : 52.17 ಲಕ್ಷ ರೂ. ಸಂಗ್ರಹ

ಸುಂಕದಕಟ್ಟಿ ಮಂಜುನಾಥ ಸ್ವಾಮಿ  ಹುಂಡಿ ಎಣಿಕೆ : 52.17 ಲಕ್ಷ ರೂ. ಸಂಗ್ರಹ

ಹೊನ್ನಾಳಿ, ಮಾ. 6 – ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಎ ಶ್ರೇಣಿಯ ಮುಜರಾಯಿ ಇಲಾಖೆಗೆ ಸೇರಿದ ನರಸಿಂಹಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಹುಂಡಿ ಎಣಿಕೆ ಮಾಡಲಾಗಿದ್ದು 52,17,230 ರೂ. ಗಳ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪಟ್ಟರಾಜುಗೌಡ ತಿಳಿಸಿದರು.

ಸೋಮವಾರ ಗ್ರಾಮದ ಸಮುದಾಯ ಭವನದಲ್ಲಿ ಸಂಜೆ 7 ಗಂಟೆಯ ವರೆಗೂ ಹುಂಡಿ ಹಣ ಎಣಿಕೆಯ ಕಾರ್ಯವು ಕಂದಾಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದ್ಧಿಗಳಿಂದ ನಡೆಯಿತು. 

ಮುಜರಾಯಿ ಇಲಾಖೆಗೆ ಸೇರಿದ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನ ಮಧ್ಯ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿದೆ. ದೇವ ಸ್ಥಾನದ ಹುಂಡಿ ಎಣಿಕೆ ಕಾರ್ಯ ವರ್ಷದಲ್ಲಿ ಎರಡು ಬಾರಿ ಮಾಡಲಾ ಗುತ್ತದೆ ಎಂದರು.

ಗ್ರಾಮದ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಸುಂಕದಕಟ್ಟೆ ಗ್ರಾಮದ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು  ವಿಶ್ರಾಂತಿ ಕೊಠಡಿಗಳು ಮತ್ತು ಸಮುದಾಯ ಭವನ ಕಟ್ಟಡ ಅಪೂರ್ಣವಾಗಿದೆ. ಇಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರಾಜುಸ್ವಾಮಿ, ದೇವಸ್ಥಾನ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ, ಆರ್.ಐ. ರಮೇಶ್, ಎಸ್.ಕೆ. ಕರಿಯಪ್ಪ, ಎಸ್.ಜಿ. ಮಂಜಪ್ಪ, ರೈತ ಮುಖಂಡ ಕರಿಬಸಪ್ಪ ಇನ್ನಿತರರಿದ್ದರು.

error: Content is protected !!