ದಾವಣಗೆರೆ, ಮಾ. 5 – ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಳಿಯ ಎನ್.ಹೆಚ್-48 ರಸ್ತೆಯಲ್ಲಿ ಯಾವುದೋ ವಾಹನದಿಂದ ಅಪಘಾತವಾಗಿದ್ದು, ಸುಮಾರು 58 ರಿಂದ 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ 2024ರ ಡಿಸೆಂಬರ್ 04ರಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಬಿಳಿ ಬಣ್ಣದ ಮಾಸಲು ಶರ್ಟ್, ಪ್ಯಾಂಟ್ ಧರಿಸಿರುತ್ತಾನೆ. ಸಂಬಂಧಪಟ್ಟಲ್ಲಿ ದಾವಣಗೆರೆ ಪೊಲೀಸ್ ಠಾಣೆ (08192-253100, 262555, 9480803222)ಯನ್ನು ಸಂಪರ್ಕಿಸಬಹುದು.
March 6, 2025