ಗೋಶಾಲೆಗಳಿಗೆ ರವಾನೆ
ದಾವಣಗೆರೆ, ಮಾ.4- ಮಿನಿ ಲಾರಿಯೊಂದರಲ್ಲಿ ಸಾಗಣೆ ಮಾಡಲಾಗುತ್ತಿದ್ದ 19 ಜಾನುವಾರುಗಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದರು.
ಚಿತ್ರದುರ್ಗದಿಂದ ದಾವಣಗೆರೆಗೆ ಬಂದ ಮಿನಿ ಲಾರಿಯಲ್ಲಿ 2 ಹಸು, 13 ಕರು, 4 ಎಮ್ಮೆಗಳಿದ್ದವು. ನಗರದ ಎಪಿಎಂಸಿ ಫ್ಲೈಓವರ್ ಬಳಿ ಬಂದಾಗ ಆ ವಾಹನ ಮತ್ತು ಬೊಲೆರೋ ನಡುವೆ ಡಿಕ್ಕಿಯಾಗಿದೆ. ಸ್ವಲ್ಪ ಹೊತ್ತು ಅಲ್ಲಿ ಮಾತಿನ ಚಕಮಕಿಯೂ ನಡೆದಿದೆ. ಆಗ ಮಿನಿ ಲಾರಿಯಲ್ಲಿ ಜಾನುವಾರು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾದ ಸತೀಶ ಪೂಜಾರಿ, ಲಿಂಗರಾಜ್ ಇನ್ನಿತರರು ಸ್ಥಳಕ್ಕೆ ಧಾವಿಸಿ, ಜಾನುವಾರುಗಳನ್ನು ವಾಹನದಲ್ಲಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು.
ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಜಾನುವಾರುಗಳನ್ನು ಹೆಬ್ಬಾಳದ ಗೋಶಾಲೆಗೆ ಕಳಿಸಿಕೊಡಲಾಯಿತು.