ರಾಣೇಬೆನ್ನೂರಿನಲ್ಲಿ ನಾಳೆ ಎಸ್ಸೆಸ್ ಕೇರ್ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣೆ

ರಾಣೇಬೆನ್ನೂರು, ಮಾ.2- ದಾವಣಗೆರೆ ಎಸ್.ಎಸ್. ಕೇರ್ ಟ್ರಸ್ಟ್, ರಾಣೇಬೆನ್ನೂರು ರೋಟರಿ ಹಾಗೂ ವರ್ತಕರ ಸಂಘಗಳ ಸಂಯುಕ್ತವಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು   ನಾಡಿದ್ದು ದಿನಾಂಕ 4ರ ಮಂಗಳವಾರ ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಂಘದಲ್ಲಿ ಆಯೋಜಿಸಲಾಗಿದೆ. 

ಜನರಲ್ ಮೆಡಿಸಿನ್, ಕಣ್ಣು, ಚರ್ಮರೋಗ, ಮಕ್ಕಳು, ಕೀಲು ಮೂಳೆ, ಇಎನ್‌ಟಿ, ರಕ್ತದೊತ್ತಡ, ಮೂತ್ರಪಿಂಡ ಮುಂತಾದ ವಿಭಾಗಗಳ ವೈದ್ಯರು ಪರೀಕ್ಷೆ ಹಾಗೂ ಅವಶ್ಯ ಔಷಧಿ ವಿತರಣೆ ಮಾಡುವರು ಎಂದು ರೋಟರಿಯ ಡಾ. ಬಸವರಾಜ ಕೇಲಗಾರ,  ವರ್ತಕ ಜಿ.ಜಿ.ಹೊಟ್ಟಿಗೌಡ್ರ ತಿಳಿಸಿದ್ದಾರೆ.

error: Content is protected !!