ಇಸ್ಪೀಟ್‌ ಜೂಜು ಅಡ್ಡೆ ಮೇಲೆ ದಾಳಿ 21 ಜನರ ಬಂಧನ, 1.04 ಲಕ್ಷ ರೂ ವಶ

ದಾವಣಗೆರೆ, ಫೆ.26- ನಗರದ ಕುವೆಂಪು ರಸ್ತೆಯಲ್ಲಿನ ಕಟ್ಟಡವೊಂದರಲ್ಲಿ ಅಕ್ರಮವಾಗಿ ಇಸ್ಪೀಟ್‌ ಜೂಜು ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 1.04 ಲಕ್ಷ ರೂ.ಗಳು ಹಾಗೂ 21 ಜನರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ನಗದು ಹಾಗೂ ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡಿದ್ದು,  ಅಕ್ರಮ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟ ಮನೆಯ ಮಾಲೀಕರ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್‌.ಎಸ್‌. ಸುನೀಲ್ ಕುಮಾರ್‌ ಹಾಗೂ ಸಿಬ್ಬಂದಿ ಜೂಜುಕೋರರನ್ನು ಬಂಧಿಸಿದ್ದಾರೆ.

error: Content is protected !!