ಚನ್ನಗಿರಿ, ಫೆ.21- ಅಪ್ರಾಪ್ತ ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರಿಗೆ ಇಲ್ಲಿನ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 25 ಸಾವಿರ ರೂ. ದಂಡ ವಿಧಿಸಿದೆ.
ಫೆ.19ರಂದು ಚನ್ನಗಿರಿ ಠಾಣೆಯ ಎಎಸ್ಐ ಉಸ್ಮಾನ್ ಮತ್ತು ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬೈಕ್ ಸವಾರನೊಬ್ಬ ಅಪ್ರಾಪ್ತ ವಯಸ್ಸಿನವ ಎಂದು ತಿಳಿದು ಬಂದಿದೆ. ಅಜ್ಜಿಹಳ್ಳಿ ಗ್ರಾಮದ ಉಮೇಶ್ ಎಂಬುವವರಿಗೆ ಸೇರಿದ ಹೀರೊ ಹೊಂಡಾ ಬೈಕ್ ವಶ ಪಡಿಸಿಕೊಳ್ಳಲಾಗಿದ್ದು, ಚನ್ನಗಿರಿ ಸಂಚಾರ ಠಾಣೆಯಲ್ಲಿ ಬೈಕ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗಿತ್ತು.
ಪ್ರಕರಣ ಕುರಿತು ನ್ಯಾಯಾಧೀಶರು ಅಪ್ರಾಪ್ತರಿಗೆ ವಾಹನ ನೀಡದಂತೆ ಎಚ್ಚರಿಕೆ ನೀಡುವ ಜತೆಗೆ ದಂಡ ವಿಧಿಸಿ ಆದೇಶಿಸಿದ್ದಾರೆ.