ದಾವಣಗೆರೆ, ಫೆ.21- ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ನಾಳೆ ದಿನಾಂಕ 22ರ ಶನಿವಾರ ಸಂಜೆ 6.15ಕ್ಕೆ ಪಾಲಿಕೆ ಮಾಜಿ ಸದಸ್ಯ ಕೆ.ಪ್ರಸನ್ನ ಕುಮಾರ್ ಜನ್ಮದಿನದ ಅಂಗವಾಗಿ ನಮ್ಮ ದಾವಣಗೆರೆ ಫೌಂಡೇ ಷನ್ ವತಿಯಿಂದ ಪೌರ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಫೌಂಡೇಷನ್ ಕಾರ್ಯದರ್ಶಿ ಪವನ್ ರೇವಣ್ಕರ್, ಇದೇ ವೇಳೆ `ನಮ್ಮ ದಾವಣಗೆರೆ ಫೌಂಡೇಷನ್’ಗೆ ಅಧಿಕೃತ ಚಾಲನೆ ನೀಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಪತ್ರಿಗೋಷ್ಠಿಯಲ್ಲಿ ಸಿ.ಚೇತನ್, ಅಂಬರೀಶ್, ವಿನಯ್ ದಿಳ್ಳೆಪ್ಪ, ಸಚಿನ್ ವೆರ್ಣೇಕರ್, ವಿಕಾಸ್ ಇದ್ದರು.