ಹೊನ್ನಾಳಿ, ಫೆ.18- ಪಟ್ಟಣದ ಶಾಲಾ-ಕಾಲೇಜು ಆವರಣದ 100 ಮೀಟರ್ ವಿಸ್ತೀರ್ಣ ವ್ಯಾಪ್ತಿಯ ಅಂಗಡಿಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವವರ ಮೇಲೆ ಪೊಲೀಸ್ ನಿರೀಕ್ಷಕ ಸುನೀಲ್‍ಕುಮಾರ್ ಅವರು ಸೋಮವಾರ ದಾಳಿ ಮಾಡಿ 45 ಪ್ರಕರಣಗಳನ್ನು ದಾಖಲಿಸಿ, 4500/- ರೂ.ಗಳ ದಂಡ ವಿಧಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್‍ಐ ಮೊಹಮ್ಮದ್ ಸೈಫುದ್ದೀನ್, ನಿರ್ಮಲ ಮತ್ತು ಸಿಬ್ಬಂದಿ ವರ್ಗದವರಿದ್ದರು.
April 7, 2025