ಪಾಲಿಕೆಯಲ್ಲಿ ಇ – ಖಾತಾ ಅಭಿಯಾನ

ದಾವಣಗೆರೆ, ಫೆ.19 – ಇಂದಿನಿಂದ ಬರುವ  ಮೇ 10 ರವರೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಇ-ಖಾತಾ ಅಭಿಯಾನ ನಡೆಯಲಿದೆ.  ನಗರದಲ್ಲಿನ ನಿವೇಶನಗಳು, ಕಟ್ಟಡಗಳು ಭೂ ಪರಿವರ್ತನೆ ಯಾಗದೇ ಉಪವಿಭಜನೆ ಮಾಡಿ, ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳಿಗೆ 24 ಸೆಪ್ಟೆಂಬರ್ 2024 ರೊಳಗೆ ನೋಂದಣಿಯಾಗಿರುವ ಆಸ್ತಿಗಳಿಗೆ ಇ – ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಸೃಜಿಸಿ ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂ: 08192-234444, ವಾಟ್ಸ್‌ಆಪ್ ನಂ: 8277234444ನ್ನು ಸಂಪರ್ಕಿಸಬೇಕೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

error: Content is protected !!