ನಗರದಲ್ಲಿ ನಾಳೆ ಸಾಂಸ್ಕೃತಿಕ ಸ್ಪರ್ಧೆ

ದಾವಣಗೆರೆ, ಫೆ.17- ವನಿತಾ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ವನಿತಾ ಸಮಾಜದಲ್ಲಿ ಇದೇ ದಿನಾಂಕ 19ರಿಂದ 22ರ ವರೆಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗ ಳನ್ನು ಆಯೋಜಿಸಲಾಗಿದೆ.

ನಾಡಿದ್ದು ದಿನಾಂಕ 19ರ ಬುಧವಾರ ಮಧ್ಯಾಹ್ನ 2.30ಕ್ಕೆ `ಪ್ರಸ್ತುತ ಸ್ಥಿತಿಯಲ್ಲಿ ಹೆಣ್ಣು ಮದುವೆ ಮತ್ತು ಮಗು’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ 3ರಿಂದ 4 ನಿಮಿಷದ ಕನ್ನಡ ಭಾಷಣ ಸ್ಪರ್ಧೆ ನಡೆಯಲಿದೆ.

ದಿನಾಂಕ 20ರ ಗುರುವಾರ ಸಂಜೆ 4.30ಕ್ಕೆ ಪುರಂದರ ದಾಸರ ಪದಗಳ ಸ್ಪರ್ಧೆ ನಡೆಯಲಿದ್ದು, ಶೃತಿಯನ್ನು ಹೊರತು ಪಡಿಸಿ ಬೇರೆ ಏನು ಬಳಸಬಾರದು ಮತ್ತು ಒಂದು ಸಂಸ್ಥೆಯಿಂದ 5 ಮಹಿಳೆಯರು ಭಾಗವಹಿಸಬಹುದು.

ದಿನಾಂಕ 21ರ ಶುಕ್ರವಾರ ಬೆಳಗ್ಗೆ 11.00ಕ್ಕೆ ಯೋಗಾಸನ ಸ್ಪರ್ಧೆ ನಡೆಯಲಿದೆ ಮತ್ತು ದಿನಾಂಕ 22ರ ಶನಿವಾರ ಮಧ್ಯಾಹ್ನ 2.30ಕ್ಕೆ ರಸ ಪ್ರಶ್ನೆ ಸ್ಪರ್ಧೆ ನಡೆಯಲಿದೆ. 

25 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಸ್ಪರ್ಧೆ ಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಪದ್ಮ ಪ್ರಕಾಶ್‌ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 9449811407.

error: Content is protected !!