ಬ್ರಹ್ಮಗಿರಿ, ಗೋವಿನತೋಟ, ಪುದು, ಬಂಟ್ವಾಳ ತಾಲ್ಲೂಕಿನ ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ, ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆ ಇಂದು ನಗರಕ್ಕೆ ಆಗಮಿಸಲಿದೆ.
ಇಂದು ಬೆಳಿಗ್ಗೆ 9ಕ್ಕೆ ಹರಿಹರದಿಂದ ದೊಡ್ಡಬಾತಿಗೆ ತಲುಪಿ, ಶಾಮನೂರು, ನಾಗನೂರು, ಶಿರಮಗೊಂಡನಹಳ್ಳಿ ಮಾರ್ಗವಾಗಿ ದಾವಣಗೆರೆಯನ್ನು ಸಂಜೆ 4ಕ್ಕೆ ತಲುಪುತ್ತದೆ. ವಿದ್ಯಾರ್ಥಿ ಭವನದಿಂದ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರದ ರಸ್ತೆ ಮುಖಾಂತರವಾಗಿ ನಂದಿ ರಥವನ್ನು ಪೂರ್ಣ ಕುಂಭ, ವಾದ್ಯಗಳೊಂದಿಗೆ ಪಿ.ಜೆ. ಬಡಾವಣೆಯ ಶ್ರೀ ರಾಮ ಮಂದಿರಕ್ಕೆ ಆಗಮಿಸಲಿದೆ.
108 ಜೋಡೇತ್ತಿನ ಬಂಡಿಗಳ ಮೂಲಕ ಶೋಭಾಯಾತ್ರೆ, ನಂದಿ ಪೂಜೆ, ಸಮೂಹಿಕ ವಿಷ್ಣು ಸಹಸ್ರನಾಮ ಪಠಣ, ವಿವಿದ ಗವ್ಯ ಉತ್ಪನ್ನಗಳ ಮಾರಾಟ ನಡೆಯಲಿದೆ.