ದಾವಣಗೆರೆ, ಫೆ. 7 – ತಾಲ್ಲೂಕಿನ ಐಗೂರು ಗ್ರಾಮದ ಶ್ರೀ ಜಯಪ್ರಕಾಶ್ ನಾರಾ ಯಣ ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾಡಜ್ಜಿಯಲ್ಲಿ ನಡೆಯುತ್ತಿದ್ದ ಶ್ರೀ ಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆಗೆ 8 ರಿಂದ 10 ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಹಿಂಪಡೆಯಲಾಗಿದೆ. ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
February 8, 2025