ದಾವಣಗೆರೆ, ಫೆ. 7- ಬ್ರಹ್ಮಶ್ರೀ ಪಿತಾಮಹಾ ಸುಭಾಷ್ ಪ್ರತೀಜಿಯವರ ದಿವ್ಯ ಪ್ರೇರಣೆಯೊಂದಿಗೆ ನಾಡಿದ್ದು ದಿನಾಂಕ 9 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ನಗರದ ನಿಜಲಿಂಗಪ್ಪ ಬಡಾವಣೆಯ ಶ್ರೀ ನಿಮಿಷಾಂಬ ಸಮುದಾಯ ಭವನದಲ್ಲಿ ಧ್ಯಾನ ಕಾರ್ಯಾಗಾರ ನಡೆಯಲಿದೆ ಎಂದು ಧ್ಯಾನ ಪ್ರಗತಿ ಪರಿಷತ್ನ ಶೇಖರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸಪೇಟೆಯ ಕರ್ನಾಟಕ ಧ್ಯಾನ ಪ್ರಗತಿ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ. ಹರಿಶಂಕರ್ ಧ್ಯಾನ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಯ ಮೂವ್ ಮೆಂಟ್ ವತಿಯಿಂದ ಅನಾಪಾನ ಸತಿ ಧ್ಯಾನ ನಡೆಸಿಕೊಡುವರು.
ಶನಿವಾರ ಬಕ್ಕೇಶ್ವರ ಸ್ಕೂಲ್, ಧರಾಮ ವಿಜ್ಞಾನ ಕಾಲೇಜು ನಂತರ ತಿಮ್ಮಾರೆಡ್ಡಿ ಕಾಲೇಜಿನಲ್ಲಿ ಧ್ಯಾನ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರವಿಕುಮಾರ್, ಕರಿಬಸಪ್ಪ, ಬಕ್ಕೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು.