ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ವತಿಯಿಂದ ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ಫೆ.8ರ ಇಂದು ಸಂಜೆ 6.30ಕ್ಕೆ `ಶಿವಗೋಷ್ಠಿ-315 ಹಾಗೂ ಸ್ಮರಣೆ-90′ ಮಾಸಿಕ ಕಾರ್ಯಕ್ರಮ ನಡೆಯಲಿದೆ.
ಮಾಗನೂರು ಪಬ್ಲಿಕ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಪ್ರಾಧ್ಯಾಪಕಿ ಸುಮತಿ ಜಯ್ಯಪ್ಪ ಅವರು `ತರಳಬಾಳು ಹುಣ್ಣಿಮೆ ನಡೆದು ಬಂದ ದಾರಿ’ ಎಂಬ ವಿಷಯದಡಿ ಉಪನ್ಯಾಸ ನೀಡಲಿದ್ದಾರೆ.