ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರ ಇಟಗಿಯ ಇತಿಹಾಸ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಲಿದೆ.
ಇತಿಹಾಸ ಪ್ರಸಿದ್ಧ ಇಟಗಿ ರಾಮೇಶ್ವರ ದೇವರ ಬ್ರಹ್ಮಕಲಶೋತ್ಸವ ನಿಮಿತ್ತ ನಡೆಯುವ ಈ ಪರಿಚಯ ಕಾರ್ಯಕ್ರಮವನ್ನು ಹೆಗಡೆ ಡಯಾಗ್ನಸ್ಟಿಕ್ ಸೆಂಟರ್‌ನ ಡಾ. ಎಸ್.ಆರ್. ಹೆಗಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ದಿನೇಶ್ ಕೆ. ಶೆಟ್ಟಿ, ಡಾ. ಶಶಿಕುಮಾರ್ ಮೆಹರ್ವಾಡೆ, ಕುಸಮ ಶೆಟ್ರು, ಸಂಪನ್ನ ಮುತಾಲಿಕ್ ಉಪಸ್ಥಿತರಿರುವರು.
ಅರುಣ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಂದ್ರಶೇಖರ ಹೆಗಡೆ ಕೊಡ್ತಗಣಿ, ಸುರೇಶ್, ಗಿರೀಶ್ ಮುದೇಗೌಡ್ರು, ಕೆ.ಬಿ. ಕೊಟ್ರೇಶ್, ಐ.ಎಂ. ರಾಮಚಂದ್ರ, ಸತೀಶ್ಚಂದ್ರ, ಪ್ರಹ್ಲಾದ್ ಭಟ್, ದತ್ತಾತ್ರೇಯ ಭಟ್, ಜಯಣ್ಣ, ಡಾ. ಶಶಿಕಾಂತ್ ಎಂ.ಸಿ., ನಾಗರಾಜ್, ಮಲ್ಯಾಡಿ ಪ್ರಭಾಕ ಶೆಟ್ಟಿ ಪ್ರಸಾದ್ ಬಂಗೇರ್, ಡಾ. ಸುಬ್ಬರಾವ್, ಅನಂತ ಹೆಗಡೆ ಓಜಗಾರ್, ವಿಶ್ವನಾಥ್ ಭಟ್ ಸಾರಂಗ, ಶಿವಾನಂದ ಹೆಗಡೆ, ಭಾಸ್ಕರ ಭಟ್ ಮತ್ತಿತರರರು ಉಪಸ್ಥಿತರಿರುವರು.