ದಾವಣಗೆರೆ, ಫೆ. 6- ದಾವಣಗೆರೆ ಲಿಟರರಿ ಫೋರಂ ಹಾಗೂ ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 7, 8 ಮತ್ತು 9 ರಂದು ಮೂರು ದಿನಗಳ ಕಾಲ ನಗರದ ಎಸ್.ಎಸ್.ಲೇಔಟ್ ನಲ್ಲಿರುವ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ‘ದಾವಣಗೆರೆ ರಾಷ್ಟ್ರೀಯ ಅಕ್ಷರ ಹಬ್ಬ-2025’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೋರಂನ ಸಂಚಾಲಕ ಶ್ರೀಹರ್ಷ ಸಾಲಿಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ದಿನಾಂಕ 7 ರಂದು ಬೆಳಿಗ್ಗೆ 10.30 ಕ್ಕೆ ಹಿರಿಯ ಸಾಹಿತಿಗಳೂ, ರಾಜ್ಯಸಭಾ ಸದಸ್ಯರೂ ಆದ ಡಾ. ಎಲ್. ಹನುಮಂತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್.ಟೊ. ಪೋತೆ, ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಚಂದನ ವಾಹಿನಿ ನಿರ್ದೇ ಶಕಿ ಹೆಚ್.ಎನ್. ಆರತಿ, ಸಾಹಿತಿಗಳಾದ ಚಾಂದಿನಿ, ಡಾ. ಎ.ಬಿ. ರಾಮಚಂದ್ರಪ್ಪ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 1.30 ರಿಂದ ಕಥಾ ಸಮಯ, ಗೋಷ್ಠಿಯಲ್ಲಿ ಕೇಶವರೆಡ್ಡಿ ಹಂದ್ರಾಳ, ರಂಗ ಸಮಯ ಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ಜಯಲಕ್ಷ್ಮೀ ಪಾಟೀಲ್, ಕವಿಗೋಷ್ಠಿಯಲ್ಲಿ ಹಿರಿಯ ಕವಿ ಸತೀಶ್ ಕುಲಕರ್ಣಿ ಮತ್ತಿತರರು ಭಾಗವಹಿಸಲಿದ್ದಾರೆ.
ನಾಡಿದ್ದು ದಿನಾಂಕ 8 ರ ಶನಿವಾರ ಬೆಳಿಗ್ಗೆ 9.30 ರಿಂದ ಕವಿ ಸಮಯ ಗೋಷ್ಠಿಯಲ್ಲಿ ಪದ್ಮ ಚಿನ್ಮಯಿ, ದಾದಾಪೀರ್ ನವಿಲೇಹಾಳ್, ಮೌಖಿಕ ಸಾಹಿತ್ಯದ ಕಾಣಿಕೆಗಳ ಕುರಿತು ಗೋಷ್ಠಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಡಾ. ಬಂಜಗೆರೆ ಜಯಪ್ರಕಾಶ್, ಕವಿ ಸಮಯ ಗೋಷ್ಠಿಯಲ್ಲಿ ಡಾ ಪದ್ಮಿನಿ ನಾಗರಾಜ್, ವಿದ್ಯಾ ರಶ್ಮಿ, ಶ್ರೀದೇವಿ ಕಳಸದ, ಶುಭಾ ಮರವಂತೆ, ಕವಿಗೋಷ್ಠಿಯಲ್ಲಿ ಹೇಮಲತಾ ವಸ್ತ್ರದ್, ಸುಜಾತಾ ಛಲವಾದಿ ಮತ್ತಿತರರು ಭಾಗವಹಿಸಲಿದ್ದಾರೆ.
ದಿನಾಂಕ 9 ರ ಭಾನುವಾರ ಬೆಳಿಗ್ಗೆ 10 ಕ್ಕೆ ಜಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11.15 ರಿಂದ ವರ್ತಮಾನ ಸಾಹಿತ್ಯದ ಸೃಜನಶೀಲ ಬಿಕ್ಕಟ್ಟುಗಳು ವಿಚಾರಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 2.30 ರಿಂದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ, ರೈತ ಮುಖಂಡ ತೇಜಸ್ವಿ ಪಟೇಲ್, ದಾಕ್ಷಾಯಿಣಿ ಹುಡೇದ, ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಮತ್ತಿತರರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಫೋರಂನ ಉದಯ್ ಇಟಗಿ, ಕೆ.ಸಿ. ಶೃತಿ, ಚಂದ್ರಕಾಂತ್ ಉಪಸ್ಥಿತರಿದ್ದರು.