ಬಂಬೂಬಜಾರ್ ಗೋಂದಳಿ ಸಮಾಜದ ಶ್ರೀ ವಿಠಲ ರುಖುಮಾಯಿ ಹರಿ ಮಂದಿರದಲ್ಲಿ 60 ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ವಿಶ್ವಶಾಂತಿಗಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹವು ಇಂದಿನಿಂದ ಇದೇ ದಿನಾಂಕ 9 ರವರೆಗೆ ನಡೆಯಲಿದೆ.
ಪ್ರತಿ ದಿನ ಬೆಳಿಗ್ಗೆ 4 ರಿಂದ 6 ಕಾಕಡಾರತಿ, ಬೆಳಿಗ್ಗೆ 7 ರಿಂದ 12 ರವರೆಗೆ ಸಾಮುದಾಯಿಕ ಪಾರಾಯಣ, ಸಂಜೆ 4.30 ರಿಂದ 6 ರವರೆಗೆ ನಾಮಜಪ, ಪ್ರವಚನ, ರಾತ್ರಿ 7 ರಿಂದ 9 ರವರೆಗೆ ಕೀರ್ತನೆ, ರಾತ್ರಿ 10.30 ರಿಂದ 1 ರವರೆಗೆ ಸಂಗೀತ, ಭಜನೆ, ಭಾರೂಡ ವ ಕಾರ್ಯಕ್ರಮಗಳು ಜರುಗಲಿವೆ.
ಇಂದು ಮಧ್ಯಾಹ್ನ 12 ರಿಂದ 1 ರವರೆಗೆ ಶ್ರೀ ಜಗದ್ಗುರು ತುಕಾರಾಮ್ ಮಹಾರಾಜ್ ಅನುಗ್ರಹದ ನಿಮಿತ್ಯ ಕೀರ್ತನೆ ಏರ್ಪಡಿಸಲಾಗಿದೆ.
ಇಂದು ಲಕ್ಷ್ಮೇಶ್ವರದ ನಾರಾಯಣ ನಭಿಸೆ ಅವರ, ನಾಳೆ ಶನಿವಾರ ದೂಪದಾಳದ ಯಶವಂತ ಅಟಕ್ ಅವರಿಂದ ಕೀರ್ತನೆ ನಡೆಯಲಿದೆ.