ರಾಣೇಬೆನ್ನೂರಿನಲ್ಲಿ ಇಂದು ಮತ್ತು ನಾಳೆ ಕರ್ನಾಟಕ ವೈಭವ ವೈಚಾರಿಕ ಹಬ್ಬ

ಇಲ್ಲಿನ ಬಸ್ ನಿಲ್ದಾಣದ ಎದುರಿನ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ ಸಮಾರಂಭವನ್ನು ಇಂದು ಮತ್ತು ನಾಳೆ ಆಯೋಜಿಸಲಾಗಿದೆ  ಎಂದು ಸಂಯೋಜಕ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ.

ಇಂದು ಸೂಲಿಬೆಲೆ ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಯುವ ಗೋಷ್ಠಿ ನಡೆಯುವುದು. ಮದ್ಯಾಹ್ನ ತೇಜಸ್ವಿನಿ ಅನಂತಕುಮಾರ್‌ ಹಾಗೂ ಅಲಕಾ ಇನಾಮದಾರ ನೇತೃತ್ವದಲ್ಲಿ ಮಹಿಳಾ ಗೋಷ್ಠಿ, ಸಂಜೆ ಸಾರ್ವಜನಿಕ ಕಾರ್ಯಕ್ರಮದ ನಂತರ ಕಲಾ ಪ್ರದರ್ಶನದಲ್ಲಿ ರಾಮು ಮೂಲಗಿ ಅವರಿಂದ ಜನಪದ ಹಾಡುಗಳು.

ನಾಳೆ ಭಾನುವಾರ ಬೆಳಿಗ್ಗೆ ಕೃಷಿ ಪದವೀಧರರ ಸಂಘದ ಸಹಯೋಗದಲ್ಲಿ `ಹೊನ್ನ ಬಿತ್ತೇವು ಜಗಕೆಲ್ಲ’ ರೈತ ಗೋಷ್ಠಿಯಲ್ಲಿ ಕಲಬುರ್ಗಿ ವಿಕಾಸ ಅಕಾಡೆಮಿ ಅಧ್ಯಕ್ಷರು ಬಸವರಾಜ ಸೇಡಂ ಭಾಷಣ, ಸಂಜೆ ಸಮಾರೋಪ ಸಮಾರಂಭ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ  ಮಂಜಮ್ಮ ಜೋಗತಿ ಭಾಗವಹಿಸುವರು. ಪ್ರಜ್ಞಾ ಪ್ರವಾಹದ ಸಂಯೋಜಕ ರಘುನಂದನ ಅವರಿಂದ ಸಮಾರೋಪದ ನುಡಿಗಳು. ನಂತರ ಸಂಗೀತ ಕಲಾವಿದೆ ಸಂಗೀತಾ ಕಟ್ಟಿ ಅವರಿಗೆ `ಸರ್ವಜ್ಞ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಲಿದೆ.

error: Content is protected !!