ದಾವಣಗೆರೆ, ಫೆ. 5 – ನಗರದ ಅರುಣ ಟಾಕೀಸ್ ಹತ್ತಿರ ಹಳೇ ಪಿ.ಬಿ ರಸ್ತೆಯಲ್ಲಿರುವ ಉಮಾ ಮಹೇಶ್ವರಿ ದೇವಸ್ಥಾನ ಹತ್ತಿರ ಖಾಲಿ ಜಾಗದಲ್ಲಿ ಸುಮಾರು 60 – 65 ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಮೃತ ದೇಹ ದೊರೆತಿದೆ. ಮೃತನು ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿಮೈ ಬಣ್ಣದವನಾಗಿದ್ದು, ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲಿವೆ. ಸಂಬಂಧಪಟ್ಟ ವರು ನಗರದ ಬಡಾವಣೆ ಪೊಲೀಸ್ (9480803249, 08192-272012) ಠಾಣೆಯನ್ನು ಸಂಪರ್ಕಿಸಬಹುದು.
February 6, 2025