ದಾವಣಗೆರೆ, ಫೆ.3- ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಶ್ರೀ ಪುರಂದರ ದಾಸರ ದೇವರ ನಾಮ ಹಾಗೂ ಶ್ರೀ ತ್ಯಾಗರಾಜರ ಕೀರ್ತನಾ ಸ್ಪರ್ಧೆಯನ್ನು ಇದೇ ದಿನಾಂಕ 16 ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಇದೇ ದಿನಾಂಕ 14 ರೊಳಗೆ ಹೆಸರು ನೋಂದಾಯಿಸಬೇಕು ಎಂದು ಶ್ರೀಮತಿ ಅಡಿಗ (9964027146), ಶ್ರೀಮತಿ ನಳಿನಿ ಅಚ್ಚ್ಯುತ್ (9886058866) ತಿಳಿಸಿದ್ದಾರೆ.